ಎಚ್ ಡಿ ಕುಮಾರಸ್ವಾಮಿ ಎಚ್ ಡಿ ದೇವೇಗೌಡ ರು ಫುಲ್ ಗರಂ

ಕರ್ನಾಟಕ ಬಂದ್ ಯಾವುದೇ ರೀತಿಯಲ್ಲಿ ಯಶಸ್ವಿಯಾಗಿಲ್ಲ ಈ ವಿಚಾರವಾಗಿ ಗರಂ ಆದ ಎಚ್ ಡಿಕೆ ಎಲ್ಲ ರಾಜಕೀಯಮುಖಂಡರು ತಮ್ಮ ಬೆಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆಯೇ ವಿನಃ ಪರಿಹಾರ ನೀಡಲಿಲ್ಲ. ಬಂದ್ ಮಾಡಿಸುವುದರಿಂದ ಅಗುವ ಪರಿಣಾಮದ ಬಗ್ಗೆ ಅರಿವು ಇದ್ದ ಹಾಗೇ ಇಲ್ಲ. ಕೆಲವರಿಗೆ ಬಂದ್ ಮಾಡಿಸುವುದು ಹವ್ಯಾಸವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪರೋಕ್ಷವಾಗಿ ಕನ್ನಡಪರ ಹೋರಾಟಗಾರರಿಗೆ ಟಾಂಗ್ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕನ್ನಡಪರ ಮತ್ತು ರೈತ ಸಂಘಟನೆಗಳು ಕರೆದ ಕರ್ನಾಟಕ ಮತ್ತು ಬೆಂಗಳೂರು ಬಂದ್ ಎಷ್ಟು? ಬಂದ್ ಕರೆನೀಡಿರುವುದರ ಹಿಂದಿನ ಉದ್ದೇಶ ಯಶಸ್ವಿಯಾಯಿತೇ? ಬಂದ್ ನಿಂದಾಗಿ ದೈನಂದಿನ ದುಡಿಮೆಯಿಂದ ಬದುಕುತ್ತಿರುವವರ ಪಾಡೇನು? ನಲವತ್ತು ವರ್ಷದ ಹಿಂದಿನ ಸಮಸ್ಯೆ, ಎಷ್ಟು ಪ್ರಧಾನಿಗಳು ಬಂದು ಹೋದರು, ಎಷ್ಟು ಸಿಎಂ ಬಂದು ಹೋದ್ರೂ.. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಪರಿಹಾರ ಆಗಬೇಕು ಎನ್ನುವ ಇಚ್ಚಾಶಕ್ತಿ ರಾಜಕೀಯ ನಾಯಕರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ.
(ಜನವರಿ 25) ಕನ್ನಡಪರ ಸಂಘಟನೆಗಳು ಕರೆನೀಡಿರುವ 'ಕರ್ನಾಟಕ ಬಂದ್' ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ, ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಒಂದೇ ಮಾತಿನಲ್ಲಿ ಕನ್ನಡ ಹೋರಾಟಗಾರರಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ. ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್ ಇನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ಕೂಡಾ, ಬಂದ್ ಕರೆನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಂದ್ ನಿಂದಾಗಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವ ಮಾತನ್ನು ಗೌಡ್ರು ಹೇಳಿದ್ದಾರೆ. ನದಿನೀರು ಹಂಚಿಕೆ ವಿಚಾರದಲ್ಲಿ, ಗೌಡ್ರಿಗೆ ಇರುವಷ್ಟು ಆಳಜ್ಞಾನ ಬಹುಷ: ವರ್ತಮಾನದ ಕರ್ನಾಟಕ ರಾಜಕೀಯದಲ್ಲಿ ಇನ್ನೊಬ್ಬರಿಗಿರಲಿಕ್ಕಿಲ್ಲ. ಮಹಾದಾಯಿ ವಿಚಾರದಲ್ಲಿ ಟ್ರಿಬ್ಯುನಲ್ ತನ್ನ ನಿಲುವನ್ನು ಈಗಾಗಲೇ ತಿಳಿಸಿದೆ. ಅನ್ಯಾಯವಾದರೆ ಇದರ ವಿರುದ್ದ ಹೋರಾಡುತ್ತೇನೆ. ಪದೇ ಪದೇ ಬಂದ್ ನಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ರಾಜ್ಯದಲ್ಲಿ ಈವರೆಗೆ ಎಷ್ಟೋ ಬಂದ್ ಆಗಿವೆ, ಇದರಿಂದ ಪ್ರಯೋಜನವಾಗಿದೆಯಾ? ಬಂದ್ ನಿಂದಾಗಿ ನಮಗೇ ಸಮಸ್ಯೆಯೇ ಹೊರತು ಪ್ರಧಾನಿಗಲ್ಲ ಎಂದು ದೇವೇಗೌಡ್ರು, ಬಂದ್ ಕರೆ ನೀಡಿದವರ ವಿರುದ್ದ ಗುಡುಗಿದ್ದಾರೆ.
Comments