ಮಾಜಿ ಕೇಂದ್ರ ಸಚಿವ ಹಾಗೂ ರೈತ ನಾಯಕ ಜೆಡಿಎಸ್ ಗೆ ಸೇರ್ಪಡೆ

ಮಹದಾಯಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಫೆ.4ರಂದು ರಾಜ್ಯಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿಯವರ ನಿಲುವು ನೋಡಿಕೊಂಡು ಹೆಜ್ಜೆ ಇಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ್ , ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್ ಸೇರಿದಂತೆ ಒಟ್ಟು 20 ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ಪಕ್ಷಗಳ ಮಾತು ಕೇಳಿಕೊಂಡು ಕೆಲವು ಸಂಘಟನೆಗಳು ದುಡುಕಿನ ನಿರ್ಧಾರ ಕೈಗೊಳ್ಳುತ್ತಿವೆ ಎಂದು ಆಪಾದಿಸಿದರು.
ಮುಂಬರುವ ವಿಧಾನಸಭಾ ಚುನಾವಣ125 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಇವರೆಲ್ಲರೂ ಪಕ್ಷಕ್ಕೆ ಭದ್ರ ಬುನಾದಿ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಬೆಳಗಾವಿಯಿಂದ ಹಲವು ಮುಖಂಡರು ಜೆಡಿಎಸ್ ಸೇರಿದ್ದಾರೆ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಬಹಳಷ್ಟು ಬದಲಾವಣೆಯಾಗಲಿದೆ. ಎರಡು ರಾಜಕೀಯ ಪಕ್ಷಗಳ ಕೃಷಿವಿರೋಧಿ ನೀತಿಯಿಂದ ಬೆಳಗಾವಿ ಭಾಗದ ಜನ ಬೇಸತ್ತಿದ್ದಾರೆ. ಸೇರ್ಪಡೆಗೊಂಡ ಮುಖಂಡರು ಯಾವುದೇ ಸ್ಥಾನಮಾನಕ್ಕಾಗಿ ಪಕ್ಷ ಸೇರಿಲ್ಲ. ಎರಡನೇ ಹಂತದ ನಾಯಕರು ಪಕ್ಷ ಸೇರಿದ್ದು, ಜೆಡಿಎಸ್ ನ್ನು ಇನ್ನಷ್ಟು ಬಲಪಡಿಸಲಿದ್ದಾರೆ ಎಂದರು.
ಶೀಘ್ರವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ನಮ್ಮ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸಿ ನಾಡಿನ ಸಂಪತ್ತು ರಕ್ಷಣೆ ಬಗ್ಗೆ ಪ್ರಮಾಣ ಮಾಡಿಸುತ್ತೇನೆ. ಈ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡಿವೆ ಎಂದರು.ಸಚಿವ ಎ ಮಂಜುಗೆ ನಾಗರಿಕತೆ ಇದ್ದರೆ ದೇವೇಗೌಡರ ಬಗ್ಗೆ ಆ ರೀತಿ ಮಾತನಾಡುತ್ತಿರಲಿಲ್ಲ. ಅವರ ಭಾಷೆ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.. ನಾಗರಿಕತೆನೇ ಅವರಿಗಿಲ್ಲ. ಈ ಚುನಾವಣೆಯಲ್ಲಿ ಗೊತ್ತಾಗುತ್ತೆ ಏನೂ ಎಂದು ಬಂದ್ ಮೂಲಕ ಏನು ಸಾಧನೆ ಆಗುತ್ತೆ ಅನ್ನೋದನ್ನು ಬಂದ್ ಕರೆದವರು ಹೇಳಬೇಕು ಎಂದು ಹೇಳಿದರು. ಎರಡು ಪಕ್ಷಗಳಿಗೂ ರಾಜ್ಯದ ಹಿತ ಬೇಕಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮಾತ್ರ ಸತ್ಯ ಹೇಳೋದು, ಮಿಕ್ಕವರೆಲ್ಲಾ ಸುಳ್ಳು ಹೇಳೋರು ಎಂದು ಎಚ್ ಡಿಕೆ ವ್ಯಂಗ್ಯವಾಡಿದರು.
Comments