ಜೆಡಿಎಸ್ ಅಭ್ಯರ್ಥಿ'ಗಳ ಮೊದಲ ಪಟ್ಟಿ ಬಿಡುಗಡೆ…..ಲಿಸ್ಟ್ ನಲ್ಲಿ ಯಾರ ಯಾರ ಹೆಸರು ಫೈನಲ್ ಆಗಿದೆ ಗೊತ್ತಾ?

ಜೆಡಿಎಸ್ ಅಭ್ಯರ್ಥಿ'ಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ನಾಯಕರು ಮುಂದಾಗಿದ್ದಾರೆ. ಈ ವಿಚಾರವಾಗಿ ಗೌಪ್ಯ ಸಭೆ ನಡೆಸಿದ್ದಾರೆ. ಸಂಕ್ರಾಂತಿ ವೇಳೆಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಅಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಯವರು ತಮ್ಮ ಪಕ್ಷದ ಶಾಸಕರು, ಹಾಗೂ ಪರಿಷತ್ ಸದಸ್ಯರ ಜೊತೆ ಮಾತುಕತೆ ನಡೆಸಿ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಗೆ ಮುಂದಾಗಿದ್ದಾರೆ. ಈಗಾಗಲೇ ದೇವೇಗೌಡರ ಜೊತೆ ಪಟ್ಟಿ ಬಿಡುಗಡೆ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದ್ದು, ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಅನ್ನೋ ಮಾಹಿತಿ ಲಭ್ಯ ವಾಗಿದೆ.ಮೂಲಗಳಿಂದ ತಿಳಿದು ಬಂದ ಪ್ರಕಾರ ಜೆಡಿಎಸ್ ಅಂತಿಮಗೊಳಿಸಿರುವ ಅಭ್ಯರ್ಥಿ'ಗಳ ಪಟ್ಟಿ ಹೀಗಿದೆ.
ಎಚ್.ಡಿ.ಕುಮಾರಸ್ವಾಮಿ –ರಾಮನಗರ , ಕೆ ಎಸ್ ರಂಗಪ್ಪ-ಚಾಮರಾಜ ಕ್ಷೇತ್ರ . ಸಿಎಸ್ ಪುಟ್ಟರಾಜು-ಮೇಲುಕೋಟೆ , ಎ.ಮಂಜು –ಮಾಗಡಿ , ಸುರೇಶ್ ಗೌಡ –ನಾಗಮಂಗಲ , ರವೀಂದ್ರ ಶ್ರೀ ಕಂಠಯ್ಯ-ಶ್ರೀರಂಗಪಟ್ಟಣ , ಹೆಚ್ ವಿಶ್ವನಾಥ್ –ಹುಣಸೂರು , ಗೌರಿ ಶಂಕರ್ -ತುಮಕೂರು ಗ್ರಾಮಾಂತರ, ಬಂಡೆಪ್ಪ ಕಾಶಂಪುರ-ಬೀದರ್ , ಶಶಿಭೂಷಣ ಹೆಗಡೆ –ಶಿರಸಿ ,ಎ ಟಿ ರಾಮಸ್ವಾಮಿ –ಅರಕಲಗೂಡು, ಲಿಂಗಸಗೂರು- ಆಲ್ಕೋಡ್ ಹನುಮಂತಪ್ಪ ,ಡಿ ಎಂ ವಿಶ್ವನಾಥ್ – ಕನಕಪುರ , ಕೆ ಪಿ ಬಚ್ಚೇಗೌಡ –ಚಿಕ್ಕಬಳ್ಳಾಪುರ ,ಜವರಾಯಗೌಡ-ಯಶವಂತಪುರ ,ಆರ್ ಪ್ರಕಾಶ್ - ಆರ್ ಆರ್ ನಗರ ,ಎಸ್ ಟಿ ಆನಂದ -ರಾಜಾಜಿ ನಗರ ,ಸರ್ವೋದಯ ನಾರಾಯಣಸ್ವಾಮಿ –ಗಾಂಧಿನಗರ , ಕೃಷ್ಣ ಪ್ಪ –ಯಲಹಂಕ ,ಇಮ್ರಾನ್ ಪಾಷಾ –ಚಾಮರಾಜಪೇಟೆ.
Comments