ಉಪ್ಪಿಯ ಕೆಪಿ ಜೆಪಿ ಪಕ್ಷದಿಂದ ಅಖಾಡಕ್ಕಿಳಿಯಲು ಮುಂದಾದ ಬಳ್ಳಾರಿಯ ಆಕಾಂಕ್ಷಿ..!!

24 Jan 2018 10:08 AM | Politics
420 Report

ಬಳ್ಳಾರಿ ನಗರದ ಸಾಮಾಜಿಕ ಕಾರ್ಯಕರ್ತ, ಯುವಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರ ರೆಡ್ಡಿ ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದಿಂದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿ ತಮಗೆ ಟಿಕೆಟ್ ನಿಡುವಂತೆ ಉಪ್ಪಿಗೆ ಮನವಿ ಸಲ್ಲಿಸಿದ್ದಾರೆ.

ಎಂ.ಕಾಂ ಪದವೀಧರರಾಗಿರುವ ಮೇಕಲ ಈಶ್ವರ ರೆಡ್ಡಿ, ಕಳೆದ 2013 ರಿಂದ ನಗರದ ವಿವಿಧ ವಾರ್ಡ್‍ಗಳ ಸಾರ್ವಜನಿಕರಿಗೆ ಸಂಬಂಧಪಟ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮನವಿ ಪತ್ರಗಳ ಮುಖಾಂತರ ಹಾಗೂ ಒಂದೆರೆಡು ಬಾರಿ ಬೀದಿ ಹೋರಾಟದ ಮುಖಾಂತರ ಸಫಲರಾಗಿದ್ದಾರೆ. ಬಳ್ಳಾರಿ ನಗರದ ಮೂಲಭೂತ ಹಾಗೂ ಇನ್ನಿತರ ಅನೇಕ ಸಮಸ್ಯೆಗಳನ್ನು ಪರಿಹರಿಸುವೆ ಎಂದು ಕೆ.ಪಿ.ಜೆ.ಪಿ. ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಬಯಸಿ ಪಕ್ಷದ ವ್ಯವಸ್ಥಾಪಕ ಅಧ್ಯಕ್ಷ ಉಪೇಂದ್ರ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ರಾಜರಾಂ ಟಿ.ಕೆ. ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರದ ಅಭ್ಯರ್ಥಿಯಾಗಿ ಪ್ರಜಾಕೀಯ ಪಕ್ಷದ ಪರವಾಗಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೋರಿದ್ದಾರೆ.

 

 

Edited By

Shruthi G

Reported By

Madhu shree

Comments