ಪದ್ಮನಾಭನಗರ ಕ್ಷೇತ್ರ : ಆರ್.ಅಶೋಕ್ ಗೆ ಸೆಡ್ಡು ಹೊಡೆಯಲು ಜೆಡಿಎಸ್‌ನಿಂದ ಮಾಸ್ಟರ್ ಪ್ಲಾನ್

ಬೆಂಗಳೂರು ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಪದ್ಮನಾಭನಗರ ಚುನಾವಣೆಯು ಕುತೂಹಲಕ್ಕೀಡು ಮಾಡಿದೆ . ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಶಾಸಕ ಆರ್ ಅಶೋಕ್ ನನ್ನು ಮಣಿಸಲು ಜೆಡಿಎಸ್‌ನಿಂದ ರಣತಂತ್ರ ನಡೆಸುತ್ತಿದೆ. ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸವಿದೆ.
ಪದ್ಮನಾಭನಗರದಿಂದ ವಿ.ಕೆ.ಗೋಪಾಲ್ ಅವರು ಜೆಡಿಎಸ್ ಅಭ್ಯರ್ಥಿ. ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪ್ರಚಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದಾರೆ.ಅಶೋಕ ಅವರಿಗೆ ಒಂದು ಕಾಲದಲ್ಲಿ ರಾಜಕೀಯ ಗುರುವಾಗಿದ್ದ ಎಂ.ಶ್ರೀನಿವಾಸ ಅವರು ಟಿಕೆಟ್ ಸಿಕ್ಕಿದರೆ ಶಿಷ್ಯನಿಗೆ ಸೋಲಿನ ರುಚಿ ತೋರಿಸಲು ಒಂದೆಡೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದಾರೆ, ಮತ್ತೊಂದೆಡೆ ಇದು ಜೆಡಿಎಸ್ ಗೆ ಲಾಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ಕಾರಣಕ್ಕೆ ಆರ್ ಅಶೋಕ್ ರನ್ನು ಮಣಿಸಲು ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರಗಾರಿಕೆ ನಡೆಸುತ್ತಿದೆ. ಗುರು ಶಿಷ್ಯರ ಕಾದಾಟ ಜೆಡಿಎಸ್ ಗೆ ಲಾಭ ಮಾಡಿಕೊಡಲಿದೆ ಎಂದೇ ಹೇಳಬಹುದು. ಆರ್ ಅಶೋಕ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ನಿಂದ ವಿ.ಕೆ.ಗೋಪಾಲ್ ಅಖಾಡಕ್ಕಿಳಿಸಲಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಅಶೋಕ್ ಸೋಲನ್ನನುಭವಿಸಲು ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
Comments