ಕಾಂಗ್ರೆಸ್ ಪ್ರಭಾವಿ ಮುಖಂಡ ಜೆಡಿಎಸ್ ಸೇರಲು ಗ್ರೀನ್ ಸಿಗ್ನಲ್...!!
ಚುನಾವಣಾ ಹೊಸ್ತಿಲಲ್ಲಿ ಸಿಎಂ ಆಪ್ತ ಎಂದೇ ಕರೆಸಿಕೊಳ್ಳುವ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಸತೀಶ್ ಜಾರಕಿಹೋಳಿ ಜೆಡಿಎಸ್'ಗೆ ಸೇರ್ಪಡೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ವರಿಷ್ಠ ಎಚ್.ಡಿ.ದೇವೇಗೌಡರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಸತೀಶ್ ಅವರು' ಜೆಡಿಎಸ್ ಪಕ್ಷದಿಂದ 25 ಸೀಟ್ ಗೆಲ್ಲಿಸಿಕೊಡ್ತೀನಿ ಎಂದು ಭರವಸೆ ನಿಡಿದ್ದು ತಮಗೆ ಪಕ್ಷದ ಉತ್ತರ ಕರ್ನಾಟಕದ ಉಸ್ತುವಾರಿ ನೀಡಬೇಕೆಂದು' ಬೇಡಿಕೆಯಿಟ್ಟಿದ್ದಾರೆ' ಎನ್ನಲಾಗಿದೆ.ಪಕ್ಷದ ಸಂಘಟನೆ, ಟಿಕೆಟ್ ಫೈನಲ್'ನಲ್ಲಿಯೂ ಸತೀಶ್'ಗೆ ಜವಾಬ್ದಾರಿ ಕೊಟ್ಟರೆ 25 ಸೀಟ್ ಪಕ್ಕಾ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದು, ಸಿದ್ದರಾಮಯ್ಯ ಅನುಸರಿಸಿದ್ದ ತಂತ್ರಗಳನ್ನು ಇವರು ರೂಪಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಬಜೆಟ್ ಅಧಿವೇಶನ ನಂತರ ಜೆಡಿಎಸ್'ಗೆ ಸತೀಶ್ ಜಾರಕಿಹೊಳಿ ಸೇರ್ಪಡೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Comments