ರೈತ ಪರ ಯಾತ್ರೆ ಮಾಡಲು ಸಜ್ಜಾಗಿರುವ ಕುಮಾರಣ್ಣ

ಬಿಜೆಪಿಯ ಪರಿವರ್ತನಾ ಯಾತ್ರೆ ಮುಗಿದ ನಂತರ ರೈತರ ಪರವಾದ ಯಾತ್ರೆಯೊಂದನ್ನು ಆರಂಭಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ .
ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಯಡ್ಡಿಯೂರಪ್ಪ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಪ್ರಾರಂಭವಾದಂತೆ ಕಾಣುತ್ತಿದೆ. ಪರಿವರ್ತನಾ ರ‍್ಯಾಲಿಯಲ್ಲಿ ರೈತರ ಆತ್ಮಹತ್ಯೆಗೆ ರಾಜ್ಯ ಸರ್ಕಾರ ಸ್ಪಂಧಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇಷ್ಟುದಿನ ಅವರು ನಿದ್ದೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗಳಿಗೆ ಭದ್ರಾವತಿ ಎಂಪಿಎಂ ಕಾರ್ಖಾನೆ ಹಾಗೂ ವಿಎಸ್ಐಎಲ್ ಕಾರ್ಖಾನೆ ಪುನಶ್ಚೇತನಗೊಳಿಸಿ ಎಂದರೆ ನಮ್ಮ ಪಕ್ಷದ ನಾಯಕನ ಜೊತೆ ಬನ್ನಿ ಮಾತಾಡೋಣ ಎನ್ನುತ್ತಾರೆ. ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಎಂದರೆ ನಮ್ಮ ನಾಯಕ, ನಿಮ್ಮ ನಾಯಕ ಎಂದು ವರ್ಗೀಕರಿಸುವುದು ಸರ್ಕಾರದ ಸಾಧನೆಯಾ ಎಂದು ಪ್ರಶ್ನಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆ ಆಗಲಿದೆ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಜೆಡಿಎಸ್ 113 ಸ್ಥಾನ ಗೆಲ್ಲುವ ಸ್ಪಷ್ಟವಾದ ಬಹುಮತಗಳಿಸಲಿದೆ. ಸಮೀಕ್ಷೆಗಳು, ಸರ್ಕಾರದ ಗುಪ್ತಚರ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಜೆಡಿಎಸ್‌ನ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದೀರಿ ಪಟ್ಟಿ ಬಿಡುಗಡೆ ಮಾಡಿಲ್ಲವೇಕೆ ಎಂದು ಕೇಳಿದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಸದ್ಯದಲ್ಲೆ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದರು.
Comments