ಕಮಲ ಹಿಡಿಯಲು ಮುಂದಾಗಿರುವ ಕೈ ಶಾಸಕರು..!!

ಪ್ರಿಯಾಕೃಷ್ಣ ಮತ್ತು ಎಂ.ಕೃಷ್ಣಪ್ಪರನ್ನು ಬಿಜೆಪಿಗೆ ಸೇರಿಸುವುದರಿಂದ ಎರಡು ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು ಎಂಬುದು ಬಿಜೆಪಿ ಸರಳ ಲೆಕ್ಕಾಚಾರ. ಕೃಷ್ಣಪ್ಪ ಪ್ರತಿನಿಧಿಸುವ ವಿಜಯನಗರ ಹಾಗೂ ಪ್ರಿಯಾಕೃಷ್ಣಪ್ರತಿನಿಧಿಸುವ ಗೋವಿಂದರಾಜನಗರದಲ್ಲಿ ಇಬ್ಬರೂ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ.ಇಬ್ಬರೂ ತಮ್ಮ ತಮ್ಮ ಕ್ಷೇತ್ರವನ್ನು ಗೆಲ್ಲುವುದಲ್ಲದೆ ಒಕ್ಕಲಿಗ ಮತಗಳನ್ನೂ ಸೆಳೆಯುವ ಶಕ್ತಿ ಹೊಂದಿದ್ದಾರೆ.
ಮುಖ್ಯವಾಗಿ ಎಂ.ಕೃಷ್ಣಪ್ಪ ಮಂಡ್ಯ ಮತ್ತು ರಾಮನಗರ ಭಾಗದಲ್ಲಿ ಪ್ರಭಾವಿಯಾಗಿದ್ದಾರೆ. ಹೀಗೆ ಇವರನ್ನು ಬಳಸಿಕೊಂಡು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತಗಳನ್ನು ಛಿದ್ರಗೊಳಿಸುವುದು ಬಿಜೆಪಿಯ ಇನ್ನೊಂದು ಉಪಯೋಜನೆ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಜತೆ ಉಭಯ ನಾಯಕರಿಗೆ ಅಸಮಾಧಾನವಿದೆ ಎನ್ನಲಾಗಿದ್ದು ಈ ಕಾರಣಕ್ಕೆ ಕಾಂಗ್ರೆಸ್ ಬಿಡಲು ತೀರ್ಮಾನಿಸಿದ್ದಾರಂತೆ. ಎಂ. ಕೃಷ್ಣಪ್ಪರನ್ನು ಹಿಂದಕ್ಕೆ ಬಿಟ್ಟು ಪಕ್ಷದಲ್ಲಿ ಡಿಕೆಶಿ ನಾಗಾಲೋಟ ಮುಂದುವರಿದಿದ್ದು ತಂದೆ-ಮಗನ ವೈಮನಸ್ಸಿಗೆ ಕಾರಣವಾಗಿದೆ. ಆದರೆ ಇಬ್ಬರೂ ಬಿಜೆಪಿ ಸೇರುವುದನ್ನು ಇನ್ನೂ ಖಚಿತಪಡಿಸಿಲ್ಲ. ಬಿಜೆಪಿ ಮೂಲಗಳ ಪ್ರಕಾರ 2018-19ರ ಬಜೆಟ್ ನಂತರ ಬಿಜೆಪಿ ಸೇರುವ ಬಗ್ಗೆ ಇಬ್ಬರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
Comments