ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ರಾಮಾರೋಢ ಮಠದ ಸ್ವಾಮೀಜಿ

ಮುಂಬರುವ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಈ ಭಾರಿ ಇಬ್ಬರು ಸ್ವಾಮಿಜೀಗಳು ಚುನಾವಣೆ ಅಖಾಡಕ್ಕೆ ಇಳಿಯುವುದಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಬೀಳಗಿ ಮತಕ್ಷೇತ್ರದಿಂದ ರಾಮಾರೋಢ ಮಠದ ಸ್ವಾಮೀಜಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಯೋಗಿ ಆದಿತ್ಯನಾಥರ ಪ್ರಭಾವ ದಿಂದ ಶತಾಯು ಗತಾಯ ರಾಜಕೀಯದಲ್ಲಿ ಎಂಟ್ರಿಯಾಗಿ ಅಭಿವೃದ್ದಿ ಮಾಡಬೇಕು ಎನ್ನುವ ಪಣ ತೊಟ್ಟಿದ್ದಾರೆ.
ಕೇವಲ ಪ್ರವಚನ, ಆಧ್ಯಾತ್ಮಕ ಎಂದು ಧಾರ್ಮಿಕ ಭಾವನೆ ಮೂಡಿಸುತ್ತಿದ್ದು ,ಈಗ ರಾಜಕೀಯ ಮಾಡುವ ಮೂಲಕ ಬದಲಾವಣೆ ತರಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಬೇಕು ಎಂಬುವ ಕನಸು ಮತದಾರರು ನನಸಾಗುವಂತೆ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.
Comments