ಚುನಾವಣಾ ಗಿಮಿಕ್ ನಡೆಸುತ್ತಿರುವ ಸಿಎಂಗೆ ಟಾಂಗ್ ಕೊಟ್ಟ ಕುಮಾರಣ್ಣ
ಗಣಿ ಹಗರಣದ ಕುರಿತು ಎಸ್ಐಟಿ ತನಿಖೆಗೆ ಒಪ್ಪಿಸಿರುವುದು ಕೇವಲ ಚುನಾವಣಾ ಗಿಮಿಕ್ ಎಂದು ಸಿಎಂ ಸಿದ್ಧರಾಮಯ್ಯಗೆ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ರು. ನನ್ನ ವಿರುದ್ಧವೂ ಒಂಬತ್ತು ಪ್ರಕರಣ ದಾಖಲಿಸಲಾಗಿದೆ. ಇಂತಹ ಯಾವುದೇ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಗಣಿ ಹಗರಣಗಳ ಕುರಿತು ಮತ್ತಷ್ಟು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಗಣಿ ಹಗರಣ ನಡೆಸಿದವರನ್ನು ಜೈಲಿಗೆ ಕಳಿಸುವುದಾಗಿ ತೊಡೆತಟ್ಟಿ ಬಳ್ಳಾರಿ ಯಾತ್ರೆ ಮಾಡಿದ್ದ ಸಿಎಂ ಅಧಿಕಾರಕ್ಕೆ ಬಂದ ನಂತರ ಇಷ್ಟು ದಿನ ಸುಮ್ಮನೆ ಕುಳಿತಿದ್ದೇಕೆ?, ಮುಂಬರುವ ಚುನಾವಣೆಯಲ್ಲಿ ಕೆಲವರನ್ನು ಹೆದರಿಸಲೆಂದೇ ಎಸ್ಐಟಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Comments