ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಗೆಲುವು ಜೆಡಿಎಸ್ ಮುಡಿಗೆ..!!

20 Jan 2018 4:48 PM | Politics
8135 Report

ಶಿವಮೊಗ್ಗ ನಗರ ಬೆಳೆದಂತೆ ರಚನೆಯಾದ ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಗ್ರಾಮಾಂತರ. ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆ ಕುಡಿಯುವ ನೀರು. ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ನಗರಕ್ಕೆ ಪಾದಯಾತ್ರೆ ನಡೆಸಲಾಗಿತ್ತು. ರಾಜಕೀಯವಾಗಿ ಇದು ಮೊದಲು ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ಬಳಿಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಯಿತು. ಆದ್ದರಿಂದ, ಕ್ಷೇತ್ರ ಎರಡು ಚುನಾವಣೆಗಳನ್ನು ಮಾತ್ರ ಕಂಡಿದೆ.

ಜೆಡಿಎಸ್‌ನ ಶಾರಾದಾ ಪೂರಾ ನಾಯ್ಕ್ ಕ್ಷೇತ್ರದ ಶಾಸಕಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಕುಮಾರಸ್ವಾಮಿ ನಾಲ್ಕನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಕಂಡಿದ್ದಾರೆ. 2013ರ ಚುನಾವಣೆಯಲ್ಲಿ ಶಾರಾದಾ ಪೂರಾ ನಾಯ್ಕ್ 48,639 ಮತಗಳನ್ನು ಪಡೆದು ಜಯಗಳಿಸಿದ್ದರು. ಕೆಜೆಪಿಯ ಜಿ.ಬಸವಣ್ಣಪ್ಪ 38,530 ಮತ ಪಡೆದು 2ನೇ ಸ್ಥಾನಗಳಿಸಿದ್ದರು. ಕಾಂಗ್ರೆಸ್‌ನ ಕರಿಯಣ್ಣ 35,640 ಮತ ಪಡೆದು 3ನೇ ಸ್ಥಾನ ಪಡೆದಿದ್ದರು. ಬಿಜೆಪಿಯ ಕೆ.ಜಿ.ಕುಮಾರಸ್ವಾಮಿ ಕೇವಲ 12,435 ಮತ ಪಡೆದು 4ನೇ ಸ್ಥಾನಗಳಿಸಿದ್ದರು. ಈಗಾಗಿ ಜೆಡಿಎಸ್ ನಿಂದ ಶಾರಾದಾ ಪೂರಾ ನಾಯ್ಕ್ ಅಖಾಡಕ್ಕಿಳಿಯಲು ಸಜ್ಜುಗೊಳಿಸಲಾಗಿದೆ. ಸಮೀಕ್ಷೆ ಪ್ರಕಾರ ಈ ಬಾರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಕಾಣುವುದರಲ್ಲಿ ಎರಡುಮಾತಿಲ್ಲ.

Edited By

Shruthi G

Reported By

Shruthi G

Comments