ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ ವಿಚಾರವಾಗಿ ದೇವೇಗೌಡರು ಏನಂದ್ರು ?

ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡ, ಈ ಬಗ್ಗೆ ಸ್ಪೀಕರ್ ಗೆ ದೂರು ನೀಡಲಾಗಿದೆ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯವೈಖರಿಯಿಂದ ಅಮಾಯಕರಿಗೆ, ನಿರಪರಾಧಿಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.
ಈ ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಒಂದು ಪಕ್ಷ ಬೆಂಕಿಕಡ್ಡಿ ಇಟ್ಕೊಂಡಿದ್ರೆ ಮತ್ತೊಂದು ಪೆಟ್ರೋಲ್ ಇಟ್ಕೊಂಡಿರುತ್ತೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕರ್ಸ್ ಆದ್ರೆ ಕಾಂಗ್ರೆಸ್ ಕ್ಯಾನ್ಸರ್ ಎಂದು ಹಿಂದೆ ಜಿ.ಎಚ್.ಪಾಟೀಲ್ ಹೇಳಿದ್ದರು ಎಂದು ಸ್ಮರಿಸಿದರು. ರಾಜ್ಯದ ಕರಾವಳಿಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿದೆ. ಹಿಂದೆಂದೂ ಕಾಣದ ಪರಿಸ್ಥಿತಿ ಈ ರಾಜ್ಯದಲ್ಲಿ ಎದುರಾಗಿದೆ. ಇಲ್ಲಿಯವರೆಗೆ ಕಾಂಗ್ರೆಸ್ಸಿನಲ್ಲಿ ಹಾರ್ಡ್ ಹಿಂದೂತ್ವ ಇತ್ತು. ಈಗ ಸಾಫ್ಟ್ ಹಿಂದೂತ್ವ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.
Comments