ಚುನಾವಣಾ ಆಯೋಗದಿಂದ ಆಮ್ ಆದ್ಮಿ ಪಕ್ಷದ ಶಾಸಕರಿಗೆ 'ಬಿಗ್ ಶಾಕ್'

ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಚುನಾವಣಾ ಆಯೋಗ ಎಎಪಿಯ 20 ಶಾಸಕರನ್ನು ಅನರ್ಹಗೊಳಿಸಿದೆ. ಶಾಸಕರನ್ನು ಅನರ್ಹಗೊಳಿಸುವ ತನ್ನ ಶಿಫಾರಸ್ಸನ್ನು ರಾಷ್ಟ್ರಪತಿಗಳ ಅನುಮತಿಗಾಗಿ ಕಳಿಸಿಕೊಟ್ಟಿದೆ.
2015ರ ದೆಹಲಿ ವಿಧಾನಸಭೆ ಚುನಾವಣೆ ಬಳಿಕ ಆಪ್ ಶಾಸಕರ ವಿರುದ್ಧ ಈ ಆರೋಪ ಕೇಳಿ ಬಂದಿತ್ತು. ಶಾಸಕರನ್ನು ಅನರ್ಹಗೊಳಿಸುವಂತೆ ವಕೀಲ ಪ್ರಶಾಂತ್ ಪಟೇಲ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಕೈಬಿಡುವಂತೆ ಆಪ್ ಶಾಸಕರು ಮಾಡಿದ್ದ ಮನವಿಯನ್ನು 2017ರ ಜೂನ್ ನಲ್ಲಿ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಪ್ರಕರಣವನ್ನು ಕೈಬಿಡಲು ಆಯೋಗಕ್ಕೆ ಸೂಚಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೂ ಮನವಿ ಸಲ್ಲಿಸಿದ್ದರು. ಸಂಸದೀಯ ಕಾರ್ಯದರ್ಶಿಗಳಾಗಿ ಮಾಡಿದ್ದ ನೇಮಕವನ್ನು ಈಗಾಗ್ಲೇ ಕೈಬಿಡಲಾಗಿದೆ ಅಂತಾನೂ ವಾದಿಸಿದ್ದರು. ಆದ್ರೆ ದೆಹಲಿ ಹೈಕೋರ್ಟ್ ಈ ಕೇಸ್ ನಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತ್ತು. ಇದೀಗ ಚುನಾವಣಾ ಆಯೋಗ 20 ಎಎಪಿ ಶಾಸಕರನ್ನು ಅನರ್ಹಗೊಳಿಸಿದೆ.
Comments