ಚನ್ನಪಟ್ಟಣ ಜನ ಸ್ವಾಭಿಮಾನಿಗಳು, ನಾನು ನಿಮ್ಮ ಮನೆಮಗಳು ನಿಮ್ಮಲ್ಲೊಬ್ಬಳಾಗಿರ್ತೇನೆ : ಅನಿತಾಕುಮಾರಸ್ವಾಮಿ

ಚನ್ನಪಟ್ಟಣ ನಿಜವಾಗ್ಲೂ ಶಕ್ತಿಭೂಮಿ. ಇಲ್ಲಿನ ಜನ ಸ್ವಾಭಿಮಾನಿಗಳು ನಾನು ನಿಮ್ಮ ಮನೆಮಗಳು ನಿಮ್ಮಲ್ಲೊಬ್ಬಳಾಗಿರ್ತೇನೆ. ನನಗೆ ನೀವು ತೋರಿಸೋ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಅಭಾರಿಯಾಗಿರ್ತೇನೆ ಎಂದು ಅಭಿಮಾನ ಅನಿತಾಕುಮಾರಸ್ವಾಮಿ ವ್ಯಕ್ತಪಡಿಸಿದರು
ತುಂಬಾನೇ ದೈವಿಕ ಶಕ್ತಿ ಇರೋ ಸ್ಥಳ ಅನ್ನೋ ನಂಬಿಕೆ ಇದೆ. ಆ ಭಗವಂತ ಹನುಮ ದೇಶದಲ್ಲಿ ಶಾಂತಿ ನೆಮ್ಮದಿ ಸಮೃದ್ದಿಯನ್ನ ಕರುಣಿಸಲಿ ಅಂತ ನಾನು ಕೂಡ ಪ್ರಾರ್ಥಿಸ್ತೇನೆ ಎಂದು ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು. ನಮ್ಮ ಕುಟುಂಬಕ್ಕೂ ಈ ಚನ್ನಪಟ್ಟಣಕ್ಕೆ ಅವಿನಾಭಾವ ಸಂಬಂಧ ಇದೆ. ಆದ್ದರಿಂದಲೇ ಚನ್ನಪಟ್ಟಣದ ಜನರು ನಮ್ಮ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟಿದ್ದಾರೆ. ನಿಮ್ಮಗಳ ವಿಶ್ವಾಸ ಪ್ರೀತಿಗೆ ನಾವೆಂದೆಂದಿಗೂ ಋಣಿಯಾಗಿರ್ತೇವೆ. ಆಂಜನೇಯನ ಆಶೀರ್ವಾದದಿಂದ ನಿಮ್ಮಗಳ ಆಶೀರ್ವಾದದಿಂದ ಕರ್ನಾಟಕದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಅನ್ನೋದು ನನ್ನ ಆಶಯ ಎಂದರು.
Comments