ಚುನಾವಣೆಗೆ ಹೆದರಿ ಅತಿರುದ್ರಯಾಗ ಮಾಡಿಸಿಲ್ಲ : ದೇವೇಗೌಡರ ಸ್ಪಷ್ಟನೆ

'ಚುನಾವಣೆಗಾಗಿ ದೇವೇಗೌಡರು ಯಾಗ ಮಾಡಿದ್ದಾರೆ' ಎಂದು ಎಲ್ಲರು ಹೇಳುತ್ತಾರೆ. ನಾವು ಕೈಗೊಂಡ ಅತಿರುದ್ರಯಾಗ ಲೋಕ ಕಲ್ಯಾಣಕ್ಕಾಗಿ ಎಂದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ದುರ್ಗಿಯನ್ನು ಪೂಜೆ ಮಾಡುತ್ತಾರೆ, ಅದು ಚಂಡಿಕಾ ಹೋಮ. ಈ ಹೋಮ ಮಾಡುವುದರಿಂದ ಮನಸ್ಸಿನ ಕೋರಿಕೆ ಈಡೆರುತ್ತೆ ಎನ್ನೂ ನಂಬಿಕೆ. ಅದರೆ ರುದ್ರನ್ನು ಪೂಜೆ ಮಾಡುವುದು ಜಗತ್ ಕಲ್ಯಾಣಕ್ಕಾಗಿ. ನಾವು ಈಶ್ವರನ ಸಂಪ್ರದಾಯದಿಂದ ಬಂದವರು ಅಗಾಗೇ ರುದ್ರಯಾಗ ಮಾಡಿಸಿದ್ದು ಎಂದು ಸ್ಪಷ್ಟಪಡಿಸಿದರು.
ಶೃಂಗೇರಿಯಲ್ಲಿ ಕುಟುಂಬ ಸಮೇತ ಹತ್ತು ದಿನಗಳ ಕಾಲ ಅತಿರುದ್ರಯಾಗ ಮಾಡಿಸಿದ್ದು ಚುನಾವಣೆ ಗೆಲ್ಲಲು ಅಲ್ಲ, ಲೋಕ ಕಲ್ಯಾಣಕ್ಕಾಗಿ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರು. ಅವರು ತಮ್ಮ ಸೊಸೆ ಎಚ್ಡಿಕೆಯವರ ಪತ್ನಿ ಅನಿತಾಕುಮಾರಸ್ವಾಮಿಯವರೊಂದಿಗೆ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವೀರಾಂಜನೇಯ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Comments