ಕಾಂಗ್ರೆಸ್ ನದ್ದು ಆಲಿಬಾಬ ಔರ್ ಚಾಲೀಸ್ ಚೋರ್ ಕಥೆಯಿದ್ದಂತೆ : ಎಚ್ ಡಿಕೆ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ ಬಿ ಪಾಟೀಲ್ ಸೇರಿ ನಾಲ್ಕೈದು ಸಚಿವರು ಈ ರಾಜ್ಯದ ಸಂಪತ್ತನ್ನು ಅಕ್ಷರಸ: ಲೂಟಿ ಮಾಡುತ್ತಿದ್ದಾರೆ. ಲೂಟಿ ಮಾಡಿದ ದುಡ್ಡಿನಲ್ಲಿ ಹೈಕಮಾಂಡಿಗೂ ಪಾಲು ನೀಡುತ್ತಿದ್ದಾರೆ. ಇದೊಂದು ರೀತಿ ಆಲಿಬಾಬ ಔರ್ ಚಾಲೀಸ್ ಚೋರ್ ಕಥೆಯಿದ್ದಂತೆ ಎಂದು ಕುಮಾರಸ್ವಾಮಿ ಯವರು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಇದುವರೆಗಿನ 4.8ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಹೊಸ ನೀರಾವರಿ ಯೋಜನೆಯನ್ನು ಕೈಗೊಳ್ಳದೇ, ಬರೀ ಜಾಹೀರಾತಿನಲ್ಲಿ ಶೂರರಾಗಿದ್ದಾರೆ. ಆ ಭಾಗ್ಯ...ಈ ಭಾಗ್ಯ ಅಂದುಕೊಂಡು ಜನರ ದಾರಿತಪ್ಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಕಬ್ಬಿನ ಹೊಲಕ್ಕೆ ನಾವು ಭೇಟಿ ಕೊಟ್ಟಿದ್ದೆವು. ಕಬ್ಬು ಕಟಾವಿಗೆ ಬಂದಿದ್ದರೂ ಕಾರ್ಖಾನೆಗೆ ಮಾರುವಂತಹ ಪರಿಸ್ಥಿತಿಯಲ್ಲಿಲ್ಲ. ರೈತರ ಸಹಕಾರೀ ಬ್ಯಾಂಕಿನ ಸಾಲಮನ್ನಾ ಘೋಷಿಸಿದ್ದರೂ, ಸರಕಾರ ಇನ್ನೂ ಹಣ ಬಿಡುಗಡೆ ಮಾಡಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷವೂ ಸಮಾವೇಶ ಮಾಡುತ್ತಿದ್ದಾರೆ. ಎರಡೂ ಪಕ್ಷಗಳು ಒಬ್ಬರೊನ್ನಬ್ಬರು ದೂರುತ್ತಿವೆಯೇ ಹೊರತು ಅಭಿವೃದ್ದಿಯ ಬಗ್ಗೆ ಮಾತನಾಡುತ್ತಿಲ್ಲ. ಯಡಿಯೂರಪ್ಪ ಹೇಳುತ್ತಾರೆ, ನಾನು ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆಂದು. ಅತ್ತ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಅವರ ಮುಖಂಡರು ಜೈಲಿಗೆ ಹೋಗಿ ಬಂದವರಲ್ಲವೇ ಎಂದು ಪ್ರತ್ಯುತ್ತರ ನೀಡುತ್ತಾರೆ. ಇದರಿಂದ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
Comments