ನವಲಗುಂದ ಕ್ಷೇತ್ರದಲ್ಲಿ ಗೆಲ್ಲುವು ಜೆಡಿಎಸ್ ಮುಡಿಗೆ..!!

18 Jan 2018 4:03 PM | Politics
584 Report

ರಾಜಕೀಯದ ಬಗ್ಗೆ ಮಾತನಾಡುವುದಾದರೆ ನವಲಗುಂದ ಅತ್ಯಂತ ಪ್ರಮುಖ ಕ್ಷೇತ್ರವೆಂದರೆ ತಪ್ಪಿಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಕಳಸಾಬಂಡೂರಿ ಹೋರಾಟ ರಾಷ್ಟ್ರದಾದ್ಯಂತ ಸುದ್ದಿ ಮಾಡಿದೆ. ಇಲ್ಲಿನ ರೈತರು ರಾಜಕಾರಣಿಗಳಿಗೆ ಪಾಠ ಕಲಿಸಲು ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ರೈತಪರವಾದ ಅಭ್ಯರ್ಥಿ ಗೆಲುವು ಸಾಧ್ಯವಾಗಬಹುದು. ಇದ್ದುದರಲ್ಲಿ ಹಾಲಿ ಶಾಸಕ ಜೆಡಿಎಸ್ ನ ಎನ್.ಎಚ್.ಕೋನರೆಡ್ಡಿ ಹೋರಾಟಗಾರರೊಂದಿಗೆ ಕಣ್ಣೀರು ಸುರಿಸುತ್ತ ನಿಂತಿದ್ದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಸದಾ ಜನರ ಮಧ್ಯೆ ಜನಸಾಮಾನ್ಯನಂತೆ ಇದ್ದು, ತಮ್ಮ ಸರಳತೆಯ ಮೂಲಕ ಜನರ ವಿಶ್ವಾಸ ಗಳಿಸಿರುವ ಅವರಿಗೆ ಗೆಲುವುವ ಒಲಿಯುವುದರಲ್ಲಿ ಅಚ್ಚರಿಯಿಲ್ಲ.
ಆದರೆ ಕಳಸಾ ಬಂಡೂರಿ ಹೋರಾಟಕ್ಕೆ ಸಂಬಂಧಿಸಿದಂತೆ, ಮಹಾದಾಯಿ ನೀರು ಹಂಚಿಕೆಯ ಸಮಸ್ಯೆಯನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದ ಬಿಜೆಪಿಯ ಗೋವಾ ಸರ್ಕಾರದೊಂದಿಗಿನ ಮಾತುಕತೆ ನಿರೀಕ್ಷಿಸಿದಷ್ಟು ಯಶಸ್ಸು ತಲುಪಿಲ್ಲ. ಇದೂ ಚುನಾವಣೆಯ ಮೇಲೆ ಪ್ರಭಾವ ಬೀರಿದರೆ ತಪ್ಪಿಲ್ಲ. 2013 ರ ಚುನಾವಣೆಯಲ್ಲಿ ಗೆದ್ದ ಎನ್.ಎಚ್.ಕೋನರೆಡ್ಡಿ 44448 ಮತ ಪಡೆದು ಗೆದ್ದಿದ್ದರೆ, ಬಿಜೆಪಿಯ ಶಂಕರ ಪಾಟೀಲ್ 41779 ಮತ ಪಡೆದಿದ್ದರು.

 

 

Edited By

Shruthi G

Reported By

Madhu shree

Comments