ಸಿಎಂ ಆಪ್ತ ಜೆಡಿಎಸ್ ನತ್ತ ಮುಖ ಮಾಡಲು ಸಿದ್ದರಾಮಯ್ಯನವರ ಆ ಒಂದು ಮಾತು ಕಾರಣ…!

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಅಧಿಕಾರ ಧರ್ಪದಿಂದ ನಡೆದುಕೊಂಡಿರುವುದು ಅನೇಕ ಹಿರಿಯ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೆಗೆ ಇವರ ವರ್ತನೆಯಿಂದ ಬೇಸತ್ತ ಈ ನಾಯಕರೇ ಕಾಂಗ್ರೆಸ್ ತೊರೆದು ಬಿಜೆಪಿ ಮತ್ತು ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಪಕ್ಷದ್ಲಲಿ ತಮ್ಮದೇ ಆದ ಟೀಂ ಕಟ್ಟಿಕೊಂಡಿರುವ ಸಿದ್ದರಾಮಯ್ಯ ಉಳಿದ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿಕೊಂಡೇ ಬರುತಿದ್ದಾರೆ.
ಆದರೆ ತಮ್ಮ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ ಸಿಎಂ ಇಬ್ರಾಹಿಂ ರವರು ಜೆಡಿಎಸ್ನತ್ತ ಮುಖಮಾಡುವುದಕ್ಕೂ ಸಿದ್ದರಾಮಯ್ಯನವರ ಆ ಒಂದು ಮಾತು ಕಾರಣ ಎಂದು ಹೇಳಲಾಗುತ್ತಿದೆ. ತಮ್ಮ ಬೆಂಬಲಿಗರ ಸಭೆಯಲ್ಲಿ ಸಿಎಂ ಇಬ್ರಾಹಿಂ ರವರು ಸಿದ್ದರಾಮಯ್ಯನವರನ್ನು ‘ನೀವು ನಮ್ಮ ಸಮುದಾಯಕ್ಕೆ ಇನ್ನು ಅನುಧಾನವನ್ನು ನೀಡಬೇಕಿತ್ತು.ಆದರೆ ನಾವು ನಿರೀಕ್ಷಿಸಿದ ಮಟ್ಟದಲ್ಲಿ ನೀವು ಏನು ಮಾಡಿಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ’. ಆಗ ಗರಂ ಆದ ಸಿದ್ದರಾಮಯ್ಯನವರು ‘ನಾನು ಅಧಿಕಾರಕ್ಕೆ ಬಂದ ಮೇಲೆ ನಿಮ್ಮನ್ನು ಮತ್ತು ನಿಮ್ಮ ಸಮುದಾಯವನ್ನು ಎಲ್ಲಿಯೂ ಕಡೆಗಣಿಸಿಲ್ಲ, ನಾನು ಕಾಂಗ್ರೆಸ್ನ ಹಿರಿಯರನ್ನು ಎದುರು ಹಾಕಿಕೊಂಡು ಎಂಎಲ್ಸಿ ಮಾಡಿಸಿದ್ದೇನೆ. ಇನ್ನು ನಾನು ಏನು ಮಾಡಬೇಕು ಎಂದು ಹೇಳಿರುವ ಅವರು ಮುಂದುವರೆದು, ‘‘ನಿಮಗೆ ನನಗಿಂತ ಹೆಚ್ಚಿನ ಸಹಾಯ ಮಾಡುವವರು ಯಾರದರು ಇದ್ದರೆ ಅಲ್ಲಿಗೆ ಹೋಗಬಹುದು’’ ಎಂದಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಈ ಒಂದು ಮಾತು ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ರ ನಡುವಿನ ಇಷ್ಟುದಿನದ ಸ್ನೇಹಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ಒಂದು ಕಾಲದಲ್ಲಿ ಪ್ರತಿಯೋಂದು ವಿಷಯವನ್ನು ಜೊತೆಯಲ್ಲಿ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತಿದ್ದ. ಸ್ನೇಹಿತರಾಗಿದ್ದ ಈ ಜೋಡಿ ಕೇವಲ ಬಾಯಿ ಮಾತಿನಿಂದ ಬೇರ್ಪಟ್ಟು, ಸಿಎಂ ಇಬ್ರಾಹಿಂ ಜೆಡಿಎಸ್ ಸೇರಲು ಮುಂದಾಗಿದ್ದಾರೆ.
ಈ ಮಾತುಗಳನ್ನು ತಮ್ಮ ಸ್ವಾಭಿಮಾನಕ್ಕೆ ಆದ ಅವಮಾನ ಎಂದು ಬಾವಿಸಿದ ಇಬ್ರಾಹಿಂ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದು, ಈಗ ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ. ಸಧ್ಯ ಇವರ ಅವಶ್ಯಕತೆ ಜೆಡಿಎಸ್ಗೂ ಇದ್ದು ಜಮೀರ್ ಅಹಮದ್ ರಿಂದ ತೆರವಾಗಿದ್ದ ಅಲ್ಪ ಸಂಖ್ಯಾತ ನಾಯಕರ ಸ್ಥಾನವನ್ನ ತುಂಬಲಿದ್ದಾರೆ. ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಇವರು ಜೆಡಿಎಸ್ ಸೇರುವುದರಿಂದ ಆ ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ತಮ್ಮನ್ನು ಕಲರ್ ಫುಲ್ ರಾಜಕಾರಣಿಯಾಗಿ ಗುರ್ತಿಸಿಕೊಂಡಿರುವ ಈ ನಾಯಕನ ಈ ನಿರ್ಧಾರವನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಕ್ ನೀಡಿದಂತಾಗಿದೆ.
Comments