'ಸಿದ್ದರಾಮಯ್ಯ ಆ್ಯಪ್ ಗೆ ವ್ಯಾಪಕ ಪ್ರತಿಕ್ರಿಯೆ

ಕಳೆದ ಎರಡು ತಿಂಗಳಿನಲ್ಲಿ 30 ಸಾವಿರಕ್ಕೂ ಅಧಿಕ ನಾಗರಿಕರು ಸಿದ್ದರಾಮಯ್ಯ ಅಪ್ಲಿಕೇಷನ್ ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಕುರಿತು ಜನವರಿ 1 ರಂದು ಅಪ್ಲಿಕೇಷನ್ ನ ವಿಶ್ಲೇಷಣೆ ನಡೆಸಿರುವ ಕಾರ್ಯಾಲಯ ಅಪ್ಲಿಕೇಷನ್ ಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ಪಟ್ಟಿ ಮಾಡಿದೆ.
ಸರ್ಕಾರದಲ್ಲಿ ಸಾರ್ವಜನಿಕರ ಸಹಭಾಗಿತ್ವ ಉದ್ದೇಶದಿಂದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಎಸ್ ಎಂ ಎಸ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿ ಅದಕ್ಕೆ ಪ್ರತಿಕ್ರಿಯೆಯಾಗಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡವರ ಸಂಖ್ಯೆ 31,359 ಈ ಪೈಕಿ ಆಂಡ್ರಾಯ್ಡ್ ಮೊಬೈಲ್ ಗಳ ಮೂಲಕ ವಿವಿಧ ಇಲಾಖೆಗಳ ಕುರಿತಂತೆ 1634 ದೂರು ಗಳು ಬಂದಿವೆ. ಒಟ್ಟು 31,359 ನಾಗರಿಕರು ಸಿದ್ದರಾಮಯ್ಯ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಡಿದ್ದು ಆ ಪೈಕಿ 1780 ಜನರು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ ಸುಮಾರು 2,300 ಸಾವಿರ ಜನರು ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.
ಆ ಪೈಕಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಬಂಧಿಸಿದಂತೆ 130 ವಿವಿಧ ಇಲಾಖೆಗಳ 119 ಲೋಕೋಪಯೋಗಿ ಇಲಾಖೆ 97 ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 91 ಸಲಹೆಗಳು ಬಂದಿವೆ. ಐಓಎಸ್ ಮಾದರಿ ಮೊಬೈಲ್ ಫೋನ್ ಮೂಲಕ 149 ದೂರುಗಳು ಬಂದಿದ್ದರೆ ಅದರಲ್ಲಿ ಲೋಕೋಪಯೋಗಿಗೆ ಸೇರಿದ 20 ಇತರೆ ಇಲಾಖೆಯ 14 ಸಾರಿಗೆ ಇಲಾಖೆಯ 10 ಇನ್ನು ಅಪ್ಲಿಕೇಷನ್ ಕುರಿತಂತೆ ಕೆಲವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಹೆಸರಿನಲ್ಲಿ ಅಪ್ಲಿಕೇಷನ್ ಬಿಡುಗಡೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಆ್ಯಪ್ ಎಂಬ ಹೆಸರಿನಲ್ಲಿ ಅಪ್ಲಿಕೇಷನ್ ಬಿಡುಗಡೆ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಕೆಲವರು ಸಿದ್ದರಾಮಯ್ಯ ಅಪ್ಲಿಕೇಷನ್ ಎಂಬ ಹೆಸರಿನಲ್ಲಿ ಅಪ್ಲಿಕೇಷನ್ ಬಿಡುಗಡೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
Comments