ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿಯಿಂದ ಮಾಸ್ಟರ್ ಪ್ಲಾನ್..!!

ಜಗ್ಗೇಶ್ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಹೈಕಮಾಂಡ್ ಮುಂದಿಟ್ಟಿದ್ದರೆನ್ನಲಾಗಿದೆ. ಮಾಜಿ ಡಿಸಿಎಂ ಆರ್.ಅಶೋಕ್ ಕೂಡ ಜಗ್ಗೇಶ್ ಪರ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ಇದೆ. ಆದರೆ, ಆರ್.ಹರೀಶ್ ಅವರು ಸಂಘಪರಿವಾರದ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹರೀಶ್ ಅವರು ಈಗಾಗಲೇ ಕ್ಷೇತ್ರಾದ್ಯಂತ ಓಡಾಟ ನಡೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಅವರು ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಕಣಕ್ಕಿಳಿಯುತ್ತಾರೆನ್ನುವ ಸುದ್ದಿಗೆ ಈಗ ಬಲ ಬಂದಿದೆ. ಮೂಲಗಳ ಪ್ರಕಾರ ಜಗ್ಗೇಶ್ ಅವರಿಗೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಜಗ್ಗೇಶ್ ಎಂಟ್ರಿಯೊಂದಿಗೆ ಮಹಾಲಕ್ಷ್ಮೀಲೇಔಟ್ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿಯೊಳಗೆ ತೀವ್ರ ಪೈಪೋಟಿ ಶುರುವಾಗಿದೆ. ಬಿಜೆಪಿ ಕಾರ್ಪೊರೇಟರ್ ಮಾಜಿ ಉಪಮೇಯರ್ ಆರ್.ಹರೀಶ್ ಕೂಡ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಈ ಬಾರಿ ಎಲ್ಲಾ ಪಕ್ಷಗಳಿಂದಲೂ ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಜೆಡಿಎಸ್ ಶಾಸಕ ಗೋಪಾಲಯ್ಯ ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಯಾಗಲಿದ್ದಾರೆ. ಕಾಂಗ್ರೆಸ್ನಿಂದ ಎಚ್.ಎಂ.ರೇವಣ್ಣರಂಥ ಘಟಾನುಘಟಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಇಬ್ಬರು ದಿಗ್ಗಜರನ್ನು ಎದುರಿಸುವಂಥ ಸಮರ್ಥ ಬಿಜೆಪಿ ಅಭ್ಯರ್ಥಿ ಅಗತ್ಯವಿದೆ. ಇದಕ್ಕೆ ಜಗ್ಗೇಶ್ ಸೂಕ್ತ ಅಭ್ಯರ್ಥಿ ಎಂಬುದು ಆರ್.ಅಶೋಕ್ ವಾದ. ಜಗ್ಗೇಶ್ ಅವರ ಕಾರ್ಯಸ್ಥಾನ ತುರುವೇಕೆರೆಯಿಂದ ಮಹಾಲಕ್ಷ್ಮೀಲೇಔಟ್ಗೆ ಶಿಫ್ಟ್ ಆಗುತ್ತಾ ಎಂದು ಕಾದುನೋಡಬೇಕು.
Comments