ಕರ್ನಾಟಕದ ಬಗ್ಗೆ ಅವಹೇಳನ ಮಾಡಿರುವ ಪಾಲೇಕರ್ ರಾಜೀನಾಮೆಗೆ ಹೆಚ್ಡಿಕೆ ಒತ್ತಾಯ
ಮಹದಾಯಿ ವಿಚಾರವಾಗಿ ಬೀದರ್ನಲ್ಲಿ ಮಾತನಾಡಿದ ಜೆಡಿಎಸ್ ನಾಯಕ ಹೆಚ್. ಡಿ. ಕುಮಾರಸ್ವಾಮಿ 'ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ಸಚಿವ ವಿನೋದ ಪಾಲೇಕರ್ ರಾಜೀನಾಮೆ ಪಡೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
ಮಹದಾಯಿ ವಿಚಾರ ದಿನೇ ದಿನೇ ಮತ್ತಷ್ಟು ಜಟಿಲಗೊಳ್ಳುತ್ತಿದೆ. ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದರೆ ಇತ್ತ ರಾಜಕಾರಣಿಗಳು ರಾಜಕೀಯ ಕೆಸರೆರಚಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಡುವೆ ಗೋವಾ ಸಚಿವರ ಉದ್ಧಟತನವೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಮಾತನಾಡಿದ ಹೆಚ್ಡಿಕೆ 'ಮಹಾದಾಯಿ ನೀರು ಹಂಚಿಕೆ ವಿಚಾರವಾಗಿ ಹುಡುಗಾಟಿಕೆಯಾಗಿ ತಗೆದುಕೊಳ್ಳುವ ಮೂಲಕ ನಗೆಪಾಟಿಗೆ ಈಡಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನರೇಂದ್ರ ಮೊದಿ ಪ್ರಧಾನಿಯಾಗಿದ್ದಾರೆ. ಅವರ ಅಧಿಕಾರವನ್ನ ಬಳಸಿಕೊಂಡು ಮಹಾದಾಯಿ ವಿಚಾರವನ್ನು ಬಗೆಹರಿಸಬೇಕಿತ್ತು' ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕಾರಣಿಗಳ ಬಿರುಸಿನ ಮಅತುಗಳು ಕೇಳಿ ಬರುತ್ತಿವೆ. ಇವೆಲ್ಲದರ ಮಧ್ಯೆ ಮಹದಾಯಿ ಹೋರಾಟ ಎಲ್ಲಿಗೆ ತಲುಪುತ್ತದೆ ಕಾದು ನೋಡಬೇಕಷ್ಟೇ.
Comments