ಅತಿ ಶೀಘ್ರದಲ್ಲಿ ರಾಜ್ಯ ರಾಜಕಾರಣಕ್ಕೆಮರಳಲಿರುವ ಜನಾರ್ಧನ ರೆಡ್ಡಿ

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಾರ್ಧನ ರೆಡ್ಡಿ ಅವರು ಬಳ್ಳಾರಿಯ ತಮ್ಮ ನಿವಾಸಕ್ಕೆ ಬಂದು ಕೂತರೆ ಸಾಕು ಬಳ್ಳಾರಿಯ ಎಲ್ಲಾ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ ಅಂತಹಾ ವರ್ಚಸ್ಸು ರೆಡ್ಡಿ ಅವರಿಗೆ ಇದೆ ಎಂದು ಶ್ರೀರಾಮುಲು ನುಡಿದಿದ್ದಾರೆ.
ಜನಾರ್ಧನ ರೆಡ್ಡಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದರೆ ಸಂಪೂರ್ಣ ಉತ್ತರ ಕರ್ನಾಟಕ ಬಿಜೆಪಿ ಮಯವಾಗಿಬಿಡುತ್ತದೆ, ಕೊಪ್ಪಳ, ಬಳ್ಳಾರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಇಲ್ಲವಾಗಿಬಿಡುತ್ತದೆ ಎಂದು ಅವರು ಹೇಳಿದರು. ಶ್ರೀರಾಮುಲು ಅವರ ಪತ್ನಿ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಗಾಳಿಸುದ್ದಿಯನ್ನು ತಳ್ಳಿಹಾಕಿದ ಅವರು ನಮ್ಮ ಕುಟುಂಬದಿಂದ ಯಾರೊಬ್ಬರೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದರು. ಬಳ್ಳಾರಿಯ ಬಿಜೆಪಿ ಮುಖಂಡರಲ್ಲಿ ಉಂಟಾಗಿರುವ ವೈಮನಸ್ಯದ ಬಗ್ಗೆ ಮಾತನಾಡಿದ ಅವರು ಕೂಡ್ಲಿಗಿ ಶಾಸಕ ನಾಗೇಂದ್ರ ಅವರು ಬಿಜೆಪಿಯಲ್ಲಿದ್ದರು ಆದರೆ ಈಗ ಇಲ್ಲ ಎಂದರು, ಶಾಸಕ ಆನಂದ್ ಸಿಂಗ್ ಅವರು ಬಿಜೆಪಿ ತೊರೆಯುವ ಬಗ್ಗೆ ಮಾತನಾಡಿದ ಆನಂದ್ ಸಿಂಗ್ ಪಕ್ಷ ಬಿಡುವುದಿಲ್ಲ, ಕೆಲವು ಭಿನ್ನಾಭಿಪ್ರಾಯಗಳು ಇವೆ ಅವನ್ನು ಚರ್ಚೆ ಮುಖಾಂತರ ಬಗೆಹರಿಸಲಾಗುವುದು ಎಂದರು.
Comments