'ನಾನು ಶೃಂಗೇರಿಯಲ್ಲಿ ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ : ಎಚ್. ಡಿ. ದೇವೇಗೌಡ

ತಾವು ಶೃಂಗೇರಿಯಲ್ಲಿ ನಡೆಸಿದ ಯಾಗದ ವಿಚಾರವಾಗಿ ಮಾತನಾಡಿದ ಅವರು 'ನಾನು ಶೃಂಗೆರಿಯಲ್ಲಿ ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ. ಅದಕ್ಕೆ ಶತ ಚಂಡಿಯಾಗ ಮಾಡುತ್ತಾರೆ. ಕೊಲ್ಲೂರಲ್ಲಿ ಯಾರೋ ಚಂಡಿಯಾಗ ಮಾಡಿಸಿದ್ರಲ್ಲ ಅದು ಶತ್ರುನಾಶಕ್ಕೆ ಮಾಡಿದ್ದು, ನಾವು ಮಾಡಿಸಿದ ಶತರುದ್ರಯಾಗ ಲೋಕ ಕಲ್ಯಾಣಕ್ಕೆ ಎಂದು ಎಚ್. ಡಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ 'ಆದಿ ಶಂಕರರು ಹಿಂದೂ ಧರ್ಮದ ಉದ್ದಾರಕರು, ಅವರ ಪೀಠದ ಗುರುಗಳಿಗೆ ಹೈದ್ರಾಬಾದ್ ನಿಜಾಮ ಚಿನ್ನದ ಕಿರೀಟ ಕೊಟ್ಟಿದ್ದಾರೆ. ಶೃಂಗೇರಿ ಗುರುಗಳು ಆಚರಿಸುತ್ತಾರಲ್ಲ ಅದು ನಿಜವಾದ ಹಿಂದುತ್ವ' ಎಂಬುವುದನ್ನೂ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು. ಈ ನಡುವೆ ಕರಾವಳೆ ಹತ್ಯೆಗಳ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ದೇವೇಗೌಡರು 'ಕರಾವಳಿಯಲ್ಲಿ ಹೆಚ್ಚು ಹತ್ಯೆಗಳಾದವಲ್ಲ ಅದು ಹಿಂದುತ್ವನಾ? ನಮಗೆ ಎಲ್ಲ ದೇವರಲ್ಲಿ ನಂಬಿಕೆಯಿದೆ, ಅನ್ಯಧರ್ಮದ ಬಗ್ಗೆ ವಿಶ್ವಾಸವೂ ಇದೆ' ಎಂದಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹಿಂದುತ್ವದ ಆಧಾರದ ಮೇಲೆ ಚುನಾವಣೆಗೆ ಸಿದ್ಧರಾಗುತ್ತಿದ್ದು, ಇವರ ಈ ಸಿದ್ಧತೆಯ ನಡುವೆ ಜೆಡಿಎಸ್ ಚುನಾವಣೆಗೆ ಹೇಗೆ ಅಣಿಯಾಗುತ್ತಿದೆ ಎಂಬ ವಿಚಾರ ಬಂದಂತಹ ಸಂದರ್ಭದಲ್ಲಿ ದೇವೇಗೌಡರು ಹೇಳಿದ ಮಾತುಗಳಿವು.
Comments