ಮಹದಾಯಿ ಹೋರಾಟಗಾರರಿಂದ ಹೊಸ ಪಕ್ಷ ಸ್ಥಾಪನೆ

ಮೂರು ದಶಕಗಳ ಕಳಸಾ-ಬಂಡೂರಿ ಸಮಸ್ಯೆಗೆ ಪರಿಹಾರವೇ ಸಿಗದೆ ರೊಚ್ಚಿಗೆದ್ದಿರುವ ಹೋರಾಟಗಾರರು, ಸರ್ಕಾರಗಳ ಆಶ್ವಾಸನೆಗಳಿಂದ ಬೇಸತ್ತು ಹೊಸ ಪಕ್ಷ ರಚನೆ ಮಾಡಿದ್ದಾರೆ. ಬಾಗಲಕೋಟೆಯ ಕೂಡಲಸಂಗಮದಲ್ಲಿ ಜನಸಾಮಾನ್ಯರ ಹೆಸರಿನ ಹೊಸ ಪಕ್ಷದ ಉದಯವಾಗಿದೆ. ಪಕ್ಷದ ಚಿಹ್ನೆ ಟ್ರಾಕ್ಟರ್ ಇರುವ ಧ್ವಜದ ಪ್ರದರ್ಶನ ಮಾಡಿ ಅಧಿಕೃತವಾಗಿ ನೂತನ ಪಕ್ಷದ ಘೋಷಣೆ ಮಾಡಿದ್ದಾರೆ.
ಸಸಿಗೆ ನೀರುಣಿಸುವ ಮೂಲಕ ರೈತ ಮಹಿಳೆ ನಿಂಬೆವ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷದ ಉದಯವಾಗಿದೆ. ಕಳಸಾ-ಬಂಡೂರಿ ಸಮಸ್ಯೆಗೆ ಪರಿಹಾರವೇ ಸಿಗದೆ ರೊಚ್ಚಿಗೆದ್ದಿರುವ ಹೋರಾಟಗಾರರು ಜನಸಾಮಾನ್ಯರ ಪಕ್ಷ ರಚನೆ ಮಾಡಿದ್ದಾರೆ. ಕಳಸಾ-ಬಂಡೂರಿ ಚೆಕ್ ಡ್ಯಾಂ ನಿರ್ಮಾಣಕ್ಕೆ ರೂಪುರೇಷೆ ತಯಾರಿಸಿಕೊಂಡೇ ಪಕ್ಷ ಅಖಾಡಕ್ಕಿಳಿದಿದೆ. ಕಳಸಾ-ಬಂಡೂರಿ ಚೆಕ್ ಡ್ಯಾಂ ನಿರ್ಮಾಣಕ್ಕೆ ರೂಪುರೇಷೆ ತಯಾರಿಸಿಕೊಂಡೇ ಪಕ್ಷ ಅಖಾಡಕ್ಕಿಳಿದಿದೆ. ಒಂದು ಮನೆಯಿಂದ ಒಂದು ರೊಟ್ಟಿ, ನೂರು ರೂಪಾಯಿ ನೀಡಿ ಒಂದು ತಿಂಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡ್ತೀವಿ ಅಂತಾ ಪಕ್ಷದ ಮುಖಂಡರು ಹೇಳುತ್ತಿ ದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಚಂದ್ರಶೇಖರ ಪಾಟೀಲ, ನೂತನ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ.ಇದೇ ವೇಳೆ ಪುಟಾಣಿ ಮಕ್ಕಳಿಂದ ಪಕ್ಷದ ವೆಬ್ಸೈಟ್ಗೆ ಚಾಲನೆ ಕೊಡಿಸಲಾಯ್ತು. ಅಲ್ಲದೆ, ಕಳಸಾ ಬಂಡೂರಿ ನಾಲೆಗಳು, ಚೆಕ್ ಡ್ಯಾಂ ನಿರ್ಮಾಣದ ರೂಪುರೇಷೆಗಳ ಮಾಹಿತಿ ಕುರಿತ ಕೈಪಿಡಿಯನ್ನೂ ಬಿಡುಗಡೆ ಮಾಡಲಾಯಿತು.
Comments