ಕೇಜ್ರಿವಾಲ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಅಣ್ಣಾ ಹಜಾರೆ
ದೇಶದಲ್ಲಿರುವ ರೈತರ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಮಾರ್ಚ್ 23 ರಂದು ಅಣ್ಣಾ ಹಜಾರಿಯವರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮತ್ತೆಂದೂ ರಾಜಕೀಯಕ್ಕೆ ಪ್ರವೇಶ ಮಾಡದಿರುವ ವ್ಯಕ್ತಿಗಳನ್ನು ನಾನು ನಡೆಸುವ ಚಳುವಳಿಗಳೊಂದಿಗೆ ಸೇರ್ಪಡೆಗೊಳಿಸಿಕೊಳ್ಳುತ್ತೇನೆ. ಮತ್ತೆಂದು ನನ್ನ ಚಳುವಳಿಗಳಲ್ಲಿ ಕೇಜ್ರಿವಾಲ್'ರಂತಹವರು ಇರುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು, ನನ್ನ ಚಳುಳಿಯಿಂದ ಮತ್ತೋರ್ವ ಕೇಜ್ರಿವಾಲ್'ಗೆ ಅವಕಾಶವಿರುವುದಿಲ್ಲ ಎಂದು ಸೋಮವಾರ ಹೇಳಿದ್ದಾರೆ. ಮತ್ತೆಂದೂ ಈ ರೀತಿಯ ಆಗುವುದಿಲ್ಲ. ಈ ಬಗ್ಗೆ ನಾನು ಭರವಸೆಯನ್ನು ನೀಡುತ್ತೇನೆ. ಭವಿಷ್ಯದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತೇನೆ. ನನ್ನೊಂದಿಗೆ ಹಾಗೂ ನನ್ನ ಚಳುವಳಿಯೊಂದಿಗೆ ಕೈಜೋಡಿಸುವವರು ಮೊದಲು ಅಫಿಡವಿಟ್ ನೀಡಬೇಕು. ಭವಿಷ್ಯದಲ್ಲಿ ರಾಜಕೀಯ ಪಕ್ಷದಲ್ಲಾಗಲೀ ಅಥವಾ ಚುನಾವಣೆಯಲ್ಲಾಗಲೀ ಸೇರ್ಪಡೆಗಳೊಳ್ಳುವುದಿಲ್ಲ ಎಂದು ಅಫಿಡವಿಟ್ ನೀಡಬೇಕು. ನಂತರವಷ್ಟೇ ನನ್ನ ಚಳುವಳಿಯಲ್ಲಿ ಅವರು ಮುಂದುವರೆಯಬಹುದು ಎಂದು ತಿಳಿಸಿದ್ದಾರೆ.
Comments