ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ

2018 ರಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ, ರಾಷ್ಟ್ರೀಯ ಪಕ್ಷಗಳ ಸಾಮಾಜಿಕ ಜಾಲತಾಣಕ್ಕಿಂತ ಜೆಡಿಎಸ್ ಸಾಮಾಜಿಕ ಜಾಲತಾಣ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಮೈಸೂರು ವಿಭಾಗೀಯ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ವಿ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ನರಸಿಂಹಮೂರ್ತಿ ಅವರ ೩೮ ನೇ ಹುಟ್ಟು ಹಬ್ಬ ಮತ್ತು ಜಿಲ್ಲಾ ಜೆಡಿಎಸ್ ಘಟಕದ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ,ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪಕ್ಷದ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಅಪಲೋಡ್ ಮಾಡುವ ಮೂಲಕ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಬೇಕು ಎಂದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗ ಜಿ.ಕೆ. ಗಂಗಾಧರ್, ಕಾರ್ಯಾಧ್ಯಕ್ಷರಾಗಿ ಗುರುಲಿಂಗಯ್ಯ, ಕಾರ್ಯದರ್ಶಿ ಯಾಗಿ ನಾಗಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಇಂದ್ರೇಶ್ ಎಂ.ಪಿ. ಇವರಿಗೆ ವಿ.ನರಸಿಂಹಮೂರ್ತಿ ಪದಗ್ರಹಣ ಮಾಡಿ ಶುಭ ಹಾರೈಸಿದರು.ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮುಖಂಡರಾದ ಜಯರಾಮು, ಚಂದನ್, ಜಯಚಂದ್ರ, ಅಭಿಷೇಕ್, ರಾಮಕೃಷ್ಣಯ್ಯ, ಚಂದ್ರು, ರವಿ ಆರ್.ವಿ. ಮತ್ತಿತ್ತರರು ಹಾಜರಿದ್ದರು.
Comments