ಕಾಂಗ್ರೆಸ್‍-ಬಿಜೆಪಿಯ ಇಬ್ಬರ ಶಾಸಕರ ಮುಖ ಜೆಡಿಎಸ್‍ನತ್ತ

15 Jan 2018 10:33 AM | Politics
8624 Report

ಗಡಿನಾಡು ಬಳ್ಳಾರಿ ರಾಜಕಾರಣದಲ್ಲಿ ಮತ್ತೆ ಜೆಡಿಎಸ್ ಪರ್ವ ಆರಂಭವಾಗುತ್ತಿದೆ ಎಂಬ ಮಾತುಗಳು ರಾಜಕೀಯ ಪಾಳಯದಿಂದ ಕೇಳಿ ಬರುತ್ತಿವೆ.

ಬಿಜೆಪಿಯಿಂದ ದಿನೇ ದಿನೇ ದೂರವಾಗುತ್ತಿರುವ ಶಾಸಕ ಆನಂದ್ ಸಿಂಗ್ ಹಾಗು ಕಾಂಗ್ರೆಸ್‍ನಿಂದ ಕಾಣೆಯಾಗುತ್ತಿರುವ ಅನಿಲ್ ಲಾಡ್ ಇಬ್ಬರು ಕೂಡ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಆನಂದ್ ಸಿಂಗ್ ಮತ್ತು ಅನಿಲ್ ಲಾಡ್ ಈಗಾಗಲೇ ಜೆಡಿಎಸ್ ವರಿಷ್ಠರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.ಮಾತುಕತೆಯ ಬಳಿಕ ಜೆಡಿಎಸ್ ವರಿಷ್ಠರು ಸದ್ಯದಲ್ಲೇ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ಅನಿಲ್ ಲಾಡ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಂದು ಕಾಲದ ಆಪ್ತಗೆಳೆಯರು ಎಂಬುದನ್ನು ಮರೆಯುವಂತಿಲ್ಲ.

Edited By

Shruthi G

Reported By

Shruthi G

Comments