ಫೆಬ್ರವರಿ ಮೊದಲ ವಾರ ಮಹಾದಾಯಿ ವಿವಾದ ಬಗೆಹರಿಸಲು ಸರ್ವಪಕ್ಷ ಸಭೆ

ಫೆಬ್ರವರಿ 2 ರಂದು ನ್ಯಾಯಾಧೀಕರಣಕ್ಕೆ ಹೋಗುವ ಸರ್ವ ಪಕ್ಷ ಮುಖಂಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಲಾಗುವುದು ಎಂದರು. ಬಿಜೆಪಿ ಅವರಿಗೆ ಸಮಸ್ಯೆ ಬಗೆಹರಿಸಬೇಡಿ ಎಂದು ಯಾರು ಹೇಳಿದ್ದಾರೆ. ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ನೀರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಲಿ. ಜನರಿಗೆ ಒಳ್ಳೆಯದಾದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಹಾದಾಯಿ ನೀರಿನ ಸಮಸ್ಯೆಗೆ ರೈತ ಸಂಘಟನೆಗಳು ಜ.25 ರಂದು ಕರ್ನಾಟಕ ಬಂದ್ ಮಾಡಲು ಕರೆ ನೀಡಿದ್ದು, ಬಂದ್‍ಗೆ ಸರ್ಕಾರದ ವಿರೋಧವಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡು ಹೋರಾಟ ಮಾಡಬಾರದು. ಆರ್‍ಎಸ್‍ಎಸ್, ಭಜರಂಗದಳ ಉಗ್ರಗಾಮಿಗಳಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮತ್ತೊಮ್ಮೆ ತಮ್ಮ ಮಾತನ್ನು ಸಮರ್ಥಿಸಿಕೊಂಡರು. ನಂತರ ರೈತ ಸೇನಾ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಮುಖ್ಯಮಂತ್ರಿ ಸರ್ವ ಪಕ್ಷಗಳ ಸಭೆ ಕರೆದು, ಸಮಸ್ಯೆ ಬಗೆಹರಿಸಲು ಪ್ರಧಾನಿ ಬಳಿ ನಿಯೋಗ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಲಿ. ಯಾವುದೇ ಪಕ್ಷದವರಾಗಲಿ ಈ ಸಮಸ್ಯೆಯನ್ನು ಬಗೆಹರಿಸಿದರೆ ಸಾಕು ಎಂದರು. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದರಿಂದ ಜನರಿಗೆ ಎಷ್ಟು ತೊಂದರೆಯಾಗಲಿದೆ ಎನ್ನುವುದನ್ನು ರಾಜಕೀಯ ಮುಖಂಡರು ಅರಿತುಕೊಳ್ಳಲಿ. ಪ್ರಧಾನಿ ಮೋದಿ ಅವರು ದೇಶದ ಪ್ರಧಾನಿಯಾಗಿ ಕೆಲಸ ಮಾಡಲಿ. ಪಕ್ಷದ ಪ್ರಧಾನಿಯಾಗಿ ಕೆಲಸ ಮಾಡುವುದು ಬೇಡವೆಂದು ಸೊಬರದಮಠ ಹೇಳಿದರು. ರಾಜ್ಯ ಮುಖ್ಯಸಚೇತಕ ಅಶೋಕಪಟ್ಟಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments