ಮಹದಾಯಿ ವಿಚಾರದಲ್ಲಿ ಜನರ ನೋವಿನ ಸಮಾಧಿ ಮೇಲೆ ಎರಡೂ ಪಕ್ಷಗಳು ಆಟವಾಡುತ್ತಿವೆ...!!

13 Jan 2018 10:01 AM | Politics
366 Report

ಮಹಾದಾಯಿ ವಿಚಾರದಲ್ಲಿ ರಾಜ್ಯ ಬಂದ್ ಗೆ ಸರಕಾರ ಬೆಂಬಲಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಇದರಿಂದ, ಜನರಿಗೆ ಯಾವುದೆ ಅನುಕೂಲವು ಆಗುತ್ತಿಲ್ಲ. ಸಮಸ್ಯೆ ಬಗೆಹರಿಸುವ ಪ್ರಯತ್ನವೂ ನಡೆಯುತ್ತಿಲ್ಲ. ಜನರ ನೋವಿನ ಸಮಾಧಿ ಮೇಲೆ ಎರಡೂ ಪಕ್ಷಗಳು ಆಟವಾಡಲು ಹೊರಟಿವೆ ಎಂದು ಅವರು ಟೀಕಿಸಿದರು.

ಮೊದಲು ಯಡಿಯೂರಪ್ಪ ಈ ಅಧ್ಯಾಯವನ್ನು ಆರಂಭಿಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನ್ಯಾಯಾಧೀಕರಣದಲ್ಲಿ ವಿವಾದ ಇತ್ಯರ್ಥವಾಗಲಿ ಎಂದಿದ್ದಾರೆ. ಬಂದ್ ಕರೆಯಿಂದ ಪ್ರಧಾನಿ ಮನಸ್ಸಿನ ಮೇಲೆ ಪರಿಣಾಮ ಬೀರಲಿ. ಅವರು ಬೆಂಗಳೂರಿಗೆ ಬರುವ ಮುನ್ನ ಸಮಸ್ಯೆ ಬಗೆಹರಿಯಲಿ. ಕರ್ನಾಟಕ ಬಂದ್ಗೆ ಜೆಡಿಎಸ್ ಬೆಂಬಲವಿದೆ ಎಂದು ಕುಮಾರಸ್ವಾಮಿ ಹೇಳಿದರು. ವಾಜಪೇಯಿ ಅಧಿಕಾರಾವಧಿಯಲ್ಲಿ ನಮ್ಮ ರಾಜ್ಯಕ್ಕೆ ಮಹಾದಾಯಿ ನೀರು ಬಳಕೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ, ಅದನ್ನು ತಡೆ ಹಿಡಿಯುವಂತೆ ಮಾಡಿದ್ದು ಮನೋಹರ್ ಪಾರಿಕ್ಕರ್. ಕಳೆದ 15 ವರ್ಷಗಳಿಂದ ಈ ಯೋಜನೆಗೆ ಅವರು ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ನರೇಂದ್ರ ಮೋದಿಯವರು ಈಗ ಹೊಸ ನಾಟಕ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ-ಕಾಂಗ್ರೆಸ್ಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಎರಡೂ ಪಕ್ಷದವರು ನಾವು ಹಿಂದೂಗಳು ಎನ್ನುತ್ತಿದ್ದಾರೆ. ನಾವೂ ಕೂಡ ಹಿಂದೂಗಳೇ. ಹಾಗಾಗಿ, ಮುಹೂರ್ತ ನೋಡಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Edited By

Shruthi G

Reported By

Madhu shree

Comments