ಕುಮಾರ ಉದ್ಯೋಗ' ಆ್ಯಪ್ ಬಿಡುಗಡೆ... !!
ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕುಮಾರ ಉದ್ಯೋಗ ಎನ್ನುವ ಆ್ಯಪ್ ಬಿಡುಗಡೆ ಮಾಡಿ ಹೆಸರು ನೋಂದಾಯಿಸಿಕೊಂಡವರಿಗೆ ಉದ್ಯೋಗದ ಭರವಸೆಯನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ.
ಸ್ವಾಮಿ ವಿವೇಕಾನಂದ ಅವರ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಯುವಕರಿಗೆ ನನ್ನದೊಂದು ಸಣ್ಣ ಉಡುಗೊರೆ ನೀಡುತ್ತಿದ್ದೇನೆ. ಕರ್ನಾಟಕದ ಯಾವೊಬ್ಬ ಯುವಕ, ಯುವತಿಯೂ ಕೂಡ ನಿರುದ್ಯೋಗ ಸಮಸ್ಯೆಯಿಂದ ತೊಂದರೆಗೀಡಾಗಬಾರದು ಎನ್ನುವುದು ನನ್ನ ಕನಸು. ಹಾಗಾಗಿಯೇ ರಾಜ್ಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರ ವಿವರಗಳನ್ನು ಸಂಗ್ರಹಿಸಲು ನಾನು ಮುಂದಾಗಿದ್ದೇನೆ.
ಉದ್ಯೋಗದ ಹುಡುಕಾಟದಲ್ಲಿರುವ ಯುವಕ-ಯುವತಿಯರು, ‘Kumara Udyoga’ (ಕುಮಾರ ಉದ್ಯೋಗ) ಎನ್ನುವ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದ ‘Kumara Udyoga ಕುಮಾರ ಉದ್ಯೋಗ’ ಎಂದು ಹುಡುಕಿ ಡೌನ್ಲೋಡ್ ಮಾಡಿಕೊಳ್ಳಬಹುದು. 2018ರ ವಿಧಾನಸಭೆಯಲ್ಲಿ ನನ್ನ ನೇತೃತ್ವದ ಸರ್ಕಾರ ರಚನೆ ಆದ ಕೂಡಲೇ ಸರ್ಕಾರಿ, ಖಾಸಗಿ ಕಂಪನಿಗಳ ಜೊತೆ ಚರ್ಚಿಸಿ ಮೊದಲ ಆದ್ಯತೆಯ ಮೇರೆಗೆ ಈ ಆಪ್‌ನಲ್ಲಿ ತಮ್ಮ ವಿವರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಲಾಗುತ್ತದೆ ಎಂದು ಹೊಸ ಭರವಸೆ ನೀಡಿದ್ದಾರೆ.
ಚುನಾವಣೆಗೂ ಮೊದಲೇ ಉದ್ಯೋಗದ ಅವಶ್ಯಕತೆ ಇರುವ ಯುವಕ, ಯುವತಿಯರ ವಿವರಗಳನ್ನು ಪಡೆದುಕೊಂಡು, ಚುನಾವಣೆಯ ನಂತರ ಸರ್ಕಾರ ರಚನೆ ಆದ ದಿನದಿಂದಲೇ ಮೊದಲ ಆದ್ಯತೆಯ ಮೇರೆಗೆ ಈ ಯುವಕ, ಯುವತಿಯರಿಗೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಯೋಜನೆಗಳನ್ನು ರೂಪಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೊಸ ಚುನಾವಣಾ ಭರವಸೆ ನೀಡಿದ್ದಾರೆ.
ಈಗಾಗಲೇ ಸೋಷಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಚಾರ ನಡೆಸುತ್ತಿರುವ ಎಚ್ ಡಿಕೆ ಭರವಸೆಗಳ ಪಟ್ಟಿಗೆ ಉದ್ಯೋಗ ಭಾಗ್ಯವನ್ನು ಸೇರಿಸಿದ್ದಾರೆ. ಚುನಾವಣೆಗೂ ಮುನ್ನವೇ ಹೆಸರು ನೋಂದಾಯಿಸಿ ಚುನಾವಣೆ ಬಳಿಕ ನಾವು ಅಧಿಕಾರಕ್ಕೆ ಬಂದರೆ ಉದ್ಯೋಗ ಗಿಟ್ಟಿಸಿಕೊಳ್ಳಿ ಎನ್ನುವ ಮೂಲಕ ರಾಜ್ಯದ ಯುವ ಸಮೂಹ ಅದರಲ್ಲಿಯೂ ನಿರದ್ಯೋಗಿ ಯುವ ಸಮೂಹದ ಮತ ಬುಟ್ಟಿಗೆ ನೇರವಾಗಿ ಕೈಹಾಕಿದ್ದಾರೆ ಎಚ್ ಡಿಕೆ.
Goutham Super kumarana plzzz youth's support kumarana. ..