ಕಾಂಗ್ರೆಸ್ ನತ್ತ ಮುಖ ಮಾಡಿದ ಸಿ.ಹೆಚ್. ವಿಜಯಶಂಕರ್
ಬಿ.ಜೆ.ಪಿ.ಯಿಂದ ದೂರವಾಗಿರುವ ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್ ಕಾಂಗ್ರೆಸ್ ಸೇರಲಿದ್ದಾರೆ. ಜನವರಿ 19 ರಂದು ಬೆಂಗಳೂರಿನ ಕೆ.ಪಿ.ಸಿ.ಸಿ. ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಅವರು ಪಕ್ಷವನ್ನು ಸೇರಲಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಶಂಕರ್, ಜನವರಿ 19 ರಂದು ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಇಂದು ಪಕ್ಷ ಸೇರ್ಪಡೆ ಕುರಿತಾಗಿ ಮಾತನಾಡಿದ್ದು, ಮರಳಿ ತವರು ಪಕ್ಷವನ್ನು ಸೇರುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಪಕ್ಷ ಸೇರ್ಪಡೆ ದಿನದಂದು ಹಲವರ ಮುಖವಾಡ ಬಯಲು ಮಾಡುತ್ತೇನೆ. ಬಿ.ಜೆ.ಪಿ. ತೊರೆದ ಕಾರಣವನ್ನು ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
Comments