ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿದ್ಯಾಬಾಲನ್
ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಶೀಘ್ರದಲ್ಲಿಯೇ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ವಿದ್ಯಾ ಬಾಲನ್ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಇಂದಿರಾ ಗಾಂಧಿ ಬಗ್ಗೆ ಬರೆದಿರುವ ಪುಸ್ತಕದ ಹಕ್ಕನ್ನು ಖರೀದಿ ಮಾಡಿದ್ದಾರೆ. ಶೀಘ್ರದಲ್ಲಿಯೇ ಇದು ಚಿತ್ರವಾಗಲಿದೆ ಎಂಬ ಸುದ್ದಿಯಿದೆ. ಪತ್ರಕರ್ತೆಯೊಬ್ಬರು ಬರೆದ ಪುಸ್ತಕ ಸಿನಿಮಾ ರೂಪದಲ್ಲಿ ಹೊರ ಬರಲಿದೆ.
ಸಿದ್ಧಾರ್ಥ್ ರಾಯ್ ಪುಸ್ತಕದ ಮೇಲೆ ಚಿತ್ರ ನಿರ್ಮಿಸಲು ಹಕ್ಕು ಪಡೆದಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಯಾರು ನಿಭಾಯಿಲಿದ್ದಾರೆ ಎಂಬ ಪ್ರಶ್ನೆಯೂ ಮೂಡಿದೆ. ನಟಿ ವಿದ್ಯಾ ಬಾಲನ್ ಇಂದಿರಾ ಗಾಂಧಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ ಈ ಬಗ್ಗೆ ವಿದ್ಯಾ ಬಾಲನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉತ್ತಮ ನಟನೆಗಾಗಿ ಪ್ರಶಸ್ತಿ ಬಾಚಿಕೊಂಡಿರುವ ವಿದ್ಯಾ ಹಿಂದಿನ ವರ್ಷ ತುಮಾರಿ ಸುಲು ಮೂಲಕ ಎಲ್ಲರ ಮನ ಗೆದ್ದಿದ್ದಾಳೆ. ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಅದ್ರಲ್ಲೂ ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಈ ಚಿತ್ರಕ್ಕೆ ವಿದ್ಯಾ ಬಣ್ಣ ಹಚ್ಚುತ್ತಾರಾ ಇಲ್ಲ ಬೇರೆ ನಟಿಯರಿಗೆ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.
Comments