ಜೆಡಿಎಸ್ ಪ್ರಾಬಲ್ಯ ಕಂಡು ಬಿಜೆಪಿಗೆ ಭೀತಿ..!!
ಒಕ್ಕಲಿಗರ ಮತಗಳ ಪ್ರಾಬಲ್ಯವಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಮೈಸೂರು ಮತ್ತಿತರ ಕಡೆ ಈ ಸಮುದಾಯವು ಜೆಡಿಎಸ್ ಜೊತೆ ಗುರುತಿಸಿಕೊಂಡಿದೆ. ಜೊತೆಗೆ ಈ ಪ್ರದೇಶದಲ್ಲಿ ಬಿಜೆಪಿ ಈಗಲೂ ಸಂಘಟನೆಯ ಕೊರತೆ ಎದುರಿಸುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಮತಕ್ಕೆ ಲಗ್ಗೆ ಇಟ್ಟರೆ ಮಾತ್ರ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಕನಸು ನನಸಾಗುತ್ತದೆ ಎಂಬುದು ಬಿಜೆಪಿ ನಾಯಕರಿಗೆ ಅರಿವಾಗಿದೆ. ಹೀಗಾಗಿ ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಜೆಡಿಎಸ್ ಪ್ರಾಬಲ್ಯ ಸಾಧಿಸಿರುವ ಒಕ್ಕಲಿಗರ ಮತಗಳನ್ನು ಕಂಡು ಬಿಜೆಪಿಗೆ ಭೀತಿ ಎದುರಾಗಿದೆ . ಹೀಗಾಗಿಯೇ ಕಳೆದ ಎರಡು ತಿಂಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಮಾಡಿದ್ದರು.
ಯೋಗಿ ಆದಿತ್ಯನಾಥ್ ಯಾವುದೇ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡದೆ ನೆರವಾಗಿ ಕುಂಬಗೋಡಿನಲ್ಲಿರುವ ಆದಿಚುಂಚನಗಿರಿಯ ವಸತಿ ಶಾಲೆಯಲ್ಲಿ ತಂಗಿದರು. ಈ ವೇಳೆ ಆದಿತ್ಯನಾಥ್ ಅವರಿಗೆ ಎಲ್ಲ ರೀತಿಯ ಉಪಚಾರವನ್ನು ಆದಿಚುಂಚನಗಿರಿ ಪೀಠ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ನೋಡಿಕೊಂಡರು. ಉತ್ತರಪ್ರದೇಶದ ಗೋರಖ್‍ನಾಥ್‍ಪುರದಲ್ಲಿರುವ ಪೀಠಕ್ಕೂ, ಆದಿಚುಂಚನಗಿರಿ ಪೀಠಕ್ಕೂ ಶತಮಾನಗಳಿಂದಲೂ ಅವಿನಾಭವ ಸಂಬಂಧವಿದೆ. ಎರಡೂ ಮಠಗಳು ನಾಥ ಸಂಪ್ರದಾಯವನ್ನು ಪರಿಪಾಲನೆ ಮಾಡುತ್ತವೆ. ಹೀಗಾಗಿ ಒಕ್ಕಲಿಗರ ಮತಗಳು ಶಕ್ತಿಸೌಧದಲ್ಲಿ ಜೆಡಿಎಸ್ ಗೆ ಅಧಿಕಾರ ಹಿಡುವ ಕನಸು ನನಸಾಗಲಿದೆ ಎಂಬುದು ಬಿಜೆಪಿ ಚಿಂತಕರ ಚಿಂತನೆ.
ಎರಡು ಬಾರಿ ಕನ್ನಡಿಗರಿಂದ ಏಟು ತಿಂದಿದ್ದ ಅಮಿತ್ ಶಾ ಈ ಬಾರಿ ಆದಿಚುಂಚನಗಿರಿ ಮಠಕ್ಕೂ ಹಾಗೂ ನಾಥ ಪರಂಪರೆಯ ಯೋಗಿ ಆದಿತ್ಯನಾಥರಿಗೂ ಹತ್ತಿರದ ಸಂಬಂಧವಿರುವ ವಿಚಾರವನ್ನು ತಿಳಿದು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರಗಾರಿಕೆ ಮಾಡಿದ್ದರು.ಇದರ ಭಾಗವಾಗಿ ಯೋಗಿ ಆದಿತ್ಯನಾಥರು ಮಠಕ್ಕೆ ಭೇಟಿ ನೀಡಿದ್ದರು.ನಿರ್ಮಲಾನಂದ ಶ್ರೀಗಳು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಾತುಕತೆಯನ್ನು ಸಹಾ ನಡೆಸಿದ್ದರು.ನಿರೀಕ್ಷೆಯಂತೆ ಆದಿತ್ಯನಾಥರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಶ್ರೀ ಮಠ ಬೆಂಬಲಿಸಬೇಕೆನ್ನುವ ರೀತಿಯಲ್ಲಿ ಅರ್ಥ ಬರುವ ಮಾತುಗಳನ್ನು ಶುರು ಮಾಡಿದ್ದರು.ಆದರೆ ರಾಜಕೀಯದಿಂದ ದೂರವಿರುವ ನಿರ್ಮಲನಂದ ಶ್ರೀ ಗಳು ಕುಮಾರಸ್ವಾಮಿಗಳ ಬಗ್ಗೆ ಭರವಸೆ ಇದೆ ಅಂತ ಸೂಚ್ಯವಾಗಿ ಮಾತನಾಡಿ ದ ನಂತರ ಆಧ್ಯಾತ್ಮದ ವಿಚಾರವಾಗಿ ಮಾತುಗಳನ್ನು ಮುಂದುವರೆಸಿದರು ಜೊತೆಗೆ ಯೋಗಿ ಆದಿತ್ಯನಾಥರ ಗುರುಗಳು ಇಲ್ಲಿನ ಆದಿಚುಂಚನಗಿರಿಯ ಬೆಟ್ಟದಲ್ಲಿ ತಪ್ಪಸ್ಸು ಮಾಡುತ್ತಿದ ಬಗ್ಗೆ ಹಾಗೂ ಇನ್ನಿತರ ಮಠಕ್ಕೆ ಸಂಬಂಧಿಸಿದ ಮಾತುಕತೆಗಳು ಸಹಾ ನಡೆಯಿತು.ಆದರೆ ರಾಜಕೀಯ ವಿಚಾರದಲ್ಲಿ ಆದಿಚುಂಚನಗಿರಿಯ ನಿಲುವು ಅದಾಗಲೇ ಯೋಗಿ ಆದಿತ್ಯನಾಥರಿಗೆ ಅರ್ಥವಾಗಿದ್ದ ಕಾರಣ ಮತ್ತೆ ಅದರ ಕುರಿತು ಪ್ರಸ್ತಾಪ ಮಾಡಲೇ ಇಲ್ಲ.ಒಂದು ಏಟಿಗೆ ಎರಡು ಹಕ್ಕಿ ಹೊಡೆಯುವ ಅಮಿತ್ ಶಾ ತಂತ್ರ ಈ ಮೂಲಕ ಆದಿಚುಂಚನಗಿರಿ ಮಠದ ಆವರಣದಲ್ಲಿ ಮತ್ತೊಮ್ಮೆ ಮಕಾಡೆ ಮಲಗಿದೆ.
Comments