ಮಾಲಾಶ್ರೀ, ಸಾಧು ಕೋಕಿಲ ಚಿತ್ತ ರಾಜಕೀಯದತ್ತ ...!!

11 Jan 2018 10:52 AM | Politics
237 Report

ಸ್ಯಾಂಡಲ್ ವುಡ್ ನ ಕಿರಣ್ ಬೇಡಿ, ಒಂದು ಕಾಲದ ಕನಸಿನ ರಾಣಿ ನಟಿ ಮಾಲಾಶ್ರೀ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೆ ದಿವಸದಲ್ಲಿ ಕನಕಪುರದಲ್ಲಿ ನಡೆಯಲಿರುವ ಕನಕ ಜಯಂತಿ ವೇಳೆ ಕಾಂಗ್ರೆಸ್ ವೇದಿಕೆಯಲ್ಲಿ ಮಾಲಾಶ್ರೀ, ಸಾಧುಕೋಕಿಲ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಚುನಾವಣೆಗಳು ಹತ್ತಿವಾಗುತ್ತಿದ್ದ ಹಾಗೇ ನಮ್ಮಲ್ಲಿರುವ ಕೆಲ ಸ್ಯಾಂಡಲ್ ವುಡ್ ನಟ ನಟಿಯರಿಗೆ ರಾಜಕೀಯದ ಬಗ್ಗೆ ಇನ್ನಿಲ್ಲದ ಮೋಹ ಸೆಳೆದುಕೊಂಡು ಬಿಡುತ್ತದೆ. ಕೆಲವರು ಪಕ್ಷದ ಗುರುತಿಸಿಕೊಂಡರೆ ಇನ್ನು ಕೆಲವರು ತಮ್ಮದೇ ರಾಜಕೀಯ ಪಕ್ಷವನ್ನು ಹುಟ್ಟಿ ಹಾಕಿ ಆ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. ಈ ವೇಳೆ ಈ ಬಾರಿ ನಡೆಯುವ ರಾಜ್ಯವಿಧಾನಸಭಾ ಚುನಾವಣೆಗಾಗಿ ಪಕ್ಷಕ್ಕಾಗಿ ಸ್ಟಾರ್ ಪ್ರಚಾರಕರನ್ನಾಗಿಯೂ ಇವರನ್ನು ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಲಾಶ್ರೀ ಮತ್ತು ಸಾಧುಕೋಕಿಲ ತಮ್ಮ ರಾಜಕೀಯಕ್ಕೆ ಸೇರ್ಪಡೆ ವಿಚಾರವಾಗಿ ಇದೂವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ, ಈ ಬಗ್ಗೆ ಕಾಲವೇ ನಿರ್ಧಾರ ಮಾಡಬೇಕಾಗಿದೆ.

Edited By

Shruthi G

Reported By

Madhu shree

Comments