ರಾಜಕೀಯಕ್ಕೆ ಎಂಟ್ರಿ ಕೊಡುವುದರ ಬಗ್ಗೆ ಸುಳಿವು ಕೊಟ್ಟ ಪ್ರಥಮ್

ಪ್ರಥಮ್ ಅವರ ಸ್ವಂತ ಊರಾದ ಹನೂರನ್ನ ತಾಲ್ಲೂಕು ಎಂದು ಘೋಷಣೆ ಆಗಿರುವ ಸಂದರ್ಭದಲ್ಲಿ ಸಿ ಎಂ ಸಿದ್ದರಾಮಯ್ಯ ಅವರಿಗೆ ಎಂ ಎಲ್ ಎ ಸ್ಥಾನಕ್ಕೆ ಟಿಕೇಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಎಂ ಎಲ್ ಎ ಸಿನಿಮಾದಲ್ಲಿ ಅಭಿನಯಿಸುವುದು ಮಾತ್ರವಲ್ಲ ನಿಜ ಜೀವನದಲ್ಲೂ ಎಂ ಎಲ್ ಎ ಆಗುವ ಆಸೆಯನ್ನ ಪ್ರಥಮ್ ವ್ಯಕ್ತ ಪಡಿಸಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ "Love u siddu boss ಹೊಸ ತಾಲೂಕ್ಕಿನ ಹೊಸ #MLA ನಾನಾಗ್ಬೇಕು ಅಂತ ತುಂಬಾ ಆಸೆ ಇದೆ. ದಯವಿಟ್ಟು ನಿಮ್ಮ ಪಕ್ಷದಿಂದ ಯಾರಿಗೂ ticket ಕೊಡ್ಬೇಡಿ. ಕೊಟ್ಟ್ರೂ ಅವರು ಗೆಲ್ಲೋದು ಕಷ್ಟ. ಹೆಂಗೋ ಈ ಸಲ election ಲಿ ಬೇರೆ ಪಕ್ಷದಿಂದನೋ,ಅಥವಾ independent ಆಗೋ ನಿಂತ್ಕೊಂಡು ಗೆದ್ರೂ ಗೆದ್ದು ಬಿಡ್ತೀನಿ. ಹೊಸ ತಾಲ್ಲೂಕಿನ ಹೊಸ MLA ನಾನೇ ಆಗ್ತೀನಿ. ಜೊತೆಗೆ ಕೆಲಸನೂ ಮಾಡ್ತೀನಿ. plz ಮನಸ್ಸು ಮಾಡಿ ಬಾಸ್" ಎಂದು ಬರೆದಿದ್ದಾರೆ. ಸದ್ಯ ಏಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಪ್ರಥಮ್ ರಾಜಕೀಯದಲ್ಲೂ ತಮ್ಮನ್ನ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಸಿ ಎಂ ಅವರ ಬಳಿ ಟಿಕೇಟ್ ಕೇಳುವುದರ ಜೊತೆಗೆ ನೀವು ಟಿಕೇಟ್ ಕೊಟ್ಟಿಲ್ಲ ಅಂದರೂ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.
Comments