ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್.ವಿಶ್ವನಾಥ್
ಸಿಎಂ ಸಿದ್ದರಾಮಯ್ಯ ಹಾಗೂ ಅಧಿಕಾರ ದುರುಪಯೋಗದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿವುದಾಗಿ ಮಾಜಿ ಸಂಸದ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡಲಾಗುತ್ತಿದೆ. ಸರ್ಕಾರದ ಖರ್ಚಿನಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ಇಂತಹವರಿಗೇ ಓಟು ಹಾಕಿ, ಇಂತಹವರನ್ನು ಸೋಲಿಸು ಎನ್ನುತ್ತಿರುವುದು ಅಧಿಕಾರ ದುರುಪಯೋಗವಾಗಿದೆ. 2017ರ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿ ಚುನಾವಣಾ ನೀತಿ ಉಲ್ಲಂಘಿಸುವುದು ಎಷ್ಟು ಸರಿ. ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಅಧಿಕಾರ ದುರುಪಯೋಗದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಿಎಂ ನವಕರ್ನಾಟಕ ಯಾತ್ರೆಯಲ್ಲಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ. ಸಿಎಂ ಪ್ರವಾಸದ ಉದ್ದೇಶ ಏನು?. ಪ್ರತಿದಿನ ಒಬ್ಬ ವಿದ್ಯಾರ್ಥಿ ಖಿನ್ನತೆಯಿಂದ ಸಾಯುತ್ತಿದ್ದಾನೆ. ಕಳೆದ ನಾಲ್ಕುವರೆ ವರ್ಷದಿಂದ ಏನು ಮಾಡಿದ್ದೀರಿ? ಯಾವ ರೀತಿಯ ನವಕರ್ನಾಟಕ ಇದು, ಭಾಗ್ಯ ಯೋಜನೆಗಳು ನಿಮ್ಮವಲ್ಲ. ಹಿಂದಿನ ಸರ್ಕಾರಗಳ ಮುಂದುವರಿದ ಭಾಗಗಳು ಎಂದು ವಿಶ್ವನಾಥ್ ತಿಳಿಸಿದರು.
ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮ ಇಂತಹದ್ದು ಎಂದು ಹೇಳಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಇಲ್ಲ. ನೀವು ಯಾವ ಸೀಮೆ ಹಣಕಾಸು ಸಚಿವ ಸ್ವಾಮೀ. ಇದನ್ನ ಆಡಳಿತ ಅಂತಾ ಕರೆಯಲು ಸಾಧ್ಯನಾ. 8 ಸಾವಿರ ಕೋಟಿ ಸಾಲ ಮಾಡಿದ್ದೀರಾ, ಆದರೆ ಬ್ಯಾಂಕ್‌ಗಳಿಗೆ ಒಂದು ಸಾವಿರ ಕೋಟಿನೂ ಕೊಟ್ಟಿಲ್ಲ. ನೀವು 1300 ಕೋಟಿಯನ್ನ ಜಾಹೀರಾತಿಗೆ ಖರ್ಚುಮಾಡಿದ್ದೀರಿ. ನಿಮ್ಮದು ಪ್ರಚಾರದ ಸರ್ಕಾರ, ಅಭಿವೃದ್ಧಿ ಸರ್ಕಾರವಲ್ಲ ಎಂದು ಲೇವಡಿ ಮಾಡಿದರು.
ಅಭಿವೃದ್ಧಿ ರಾಜ್ಯ ಅಂತೀರಾ ಎಲ್ಲಿ ಅಭಿವೃದ್ಧಿ? ಎಲ್ಲಾ ರೀತಿಯಲ್ಲೂ ರಾಜ್ಯದಲ್ಲಿ ದುಂದು ವೆಚ್ಚ ನಡೆಯುತ್ತಿದೆ. ನಂಬರ್ ಒನ್ ಸಿಎಂ ಅಂತೀರಾ ಎಲ್ಲಾ ಬರಿ ದುಂದು ವೆಚ್ಚಗಳು. ಸಿಎಂ ಕಚೇರಿಯಲ್ಲಿ 465 ಜನ ಕೆಲಸ ಮಾಡ್ತೀದ್ದಾರೆ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಅಥವಾ ಜನಸಾಮಾನ್ಯ ನಿಮ್ಮ ಕಚೇರಿಗೆ ಪತ್ರ ಬರೆದ್ರೆ ಉತ್ತರ ಕೊಡೋದಿಲ್ಲ. 2018ರ ಚುನಾವಣೆ ಮುಂದಿಟ್ಟುಕೊಂಡು ಈ ರೀತಿ ಚುನಾವಣಾ ನೀತಿ ಉಲ್ಲಂಘನೆ ಮಾಡೋದು ಎಷ್ಟು ಸರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.ಸಮೀಕ್ಷೆ ವರದಿಗಳೆಲ್ಲ ಸುಳ್ಳು. ಸಿ ವೋಟರ್ ಸಮೀಕ್ಷೆ ಅನ್ನೋದು ಕ್ಯಾಶ್ ಫಾರ್ ಸಮೀಕ್ಷೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಮಹತ್ವ ಇಲ್ಲ. ಜನರ ನಾಡಿ ಮಿಡಿತ ಬೇರೆ ಇದೆ ಎಂದರು.
Comments