ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ ಜೆಡಿಎಸ್ ವರಿಷ್ಠರು..!!

ಮುಂದಿನ ವಿಧಾನಸಭೆಗೆ ತಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡೋದು ಎಂದು ವರಿಷ್ಠರು ಹೇಳಿದ್ದರು. ಈಗಲೂ ಕುಟುಂಬದಿಂದ ನಾವಿಬ್ಬರೇ ಚುನಾವಣೆ ಎದುರಿಸೋದು ಎಂದು ಹೆಚ್‍ಡಿಕೆ ಹೇಳ್ತಿದ್ದರು . ಆದ್ರೆ ಕಾರ್ಯಕರ್ತರು, ಕ್ಷೇತ್ರದ ಮುಖಂಡರ ಮೂಲಕ ಮೂರನೇ ಅಭ್ಯರ್ಥಿಯ ಘೋಷಣೆಯಾಗಿದೆ.
ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಘೋಷಣೆ ಆಗಿದ್ದು, ಸ್ಥಳೀಯ ಮುಖಂಡರು ಈ ಘೋಷಣೆ ಮಾಡಿದ್ದಾರೆ. ಆ ಬಳಿಕ ಮತ್ತೊಂದು ಸೀನ್ ನಡೆಯಲಿದ್ದು, ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ವಿಚಾರದಲ್ಲೂ ಇದೇ ಪ್ಲಾನ್ ಆಗಲಿದೆ ಎಂದು ಹೇಳಲಾಗ್ತಿದೆ. ಪ್ರಜ್ವಲ್ ಬೇಲೂರಿನಿಂದ ಸ್ಪರ್ಧೆ ಮಾಡೋ ಸಾಧ್ಯತೆ ಇದೆ. ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಅನಿತಾ ಅವರಿಗೆ ಟಿಕೆಟ್ ಕೊಟ್ಟ ಮೇಲೆ ಪ್ರಜ್ವಲ್ ಗೆ ಅವಕಾಶ ಯಾಕಿಲ್ಲ ಎಂಬ ಪ್ರಶ್ನೆ ಉದ್ಭವಿಸಲಿದೆ. ಹೀಗಾಗಿ ದೇವೇಗೌಡರ ಕುಟುಂಬದ ನಾಲ್ವರು ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಜೆಡಿಎಸ್ ವರಿಷ್ಠರು ಅನಿತಾ ಕುಮಾರಸ್ವಾಮಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ . ಅನಿತಾ ಕುಮಾರ ಸ್ವಾಮಿ ಯವರು ಈ ಭಾರಿ ಚನ್ನಪಟ್ಟಣ ಕ್ಷೇತ್ರ ದಿಂದ ಕಣಕ್ಕಿಳಿಯೋದು ಪಕ್ಕಾ. ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಗೆ ಸೆಡ್ಡು ಹೊಡೆಯಲು ಅನಿತಾ ಕುಮಾರಸ್ವಾಮಿ ಯವರು ರಾಜಕೀಯ ಕಣಕ್ಕಿಳಿದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಜೊತೆ ಮುಖಂಡರು ಅಂತಿಮ ಮಾತುಕತೆ ನಡೆಸಿ ಎಚ್‍ಡಿಕೆಯವರ ಅನುಮತಿ ಪಡೆದು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.
ಚನ್ನಪಟ್ಟಣ ಮುಖಂಡರಾದ ಮಾಜಿ ಶಾಸಕ ಎಂ.ಸಿ ಅಶ್ವಥ್, ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಹಾಗೂ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ರಿಂದ ಅಭ್ಯರ್ಥಿ ಘೋಷಣೆಯಾಗಿದೆ. ಈಗಾಗಲೇ ಕಾರ್ಯಕರ್ತರ ಜೊತೆಗೆ ಪ್ರಮುಖ ಮುಖಂಡರು ಸಭೆ ನಡೆಸಿದ್ದಾರೆ.
Comments