ಎಲ್ಲರ ಕಣ್ಣು ಇದೀಗ ಕರ್ನಾಟಕ ಚುನಾವಣೆಯತ್ತ
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಕ್ಯಾನ್ಬೆರಾ, ಲಂಡನ್ ಮತ್ತು ಟೊಕಿಯೊ ರಾಷ್ಟ್ರಗಳೂ ಕೂಡ ಕರ್ನಾಟಕ ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಗಳು ಯಾರಾಗುತ್ತಾರೆಂಬುದನ್ನು ಕಾತರದಿಂದ ಕಾದು ನೋಡುತ್ತಿದೆ.
ರಾಜಧಾನಿ ದೆಹಲಿ ಹಾಗೂ ಚೆನ್ನೈ ನಗರಕ್ಕೆ ಆಗಮಿಸುತ್ತಿರುವ ವಿದೇಶಿ ರಾಯಭಾರಿಗಳು, ಚುನಾವಣೆ ಹಿನ್ನಲೆಯಲ್ಲಿ ಇದೀಗ ಬೆಂಗಳೂರು ನಗರ ಹಾಗೂ ರಾಜ್ಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 2019ನೇ ಸಂಸತ್ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಸ್ಪರ್ಧೆಗಿಳಿಯುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಮಗೆ ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments