ನಾನು ಯಾವ ಪ್ರಕರಣದಲ್ಲಿಯೂ ಹಿಟ್ ಅಂಡ್ ರನ್ ಮಾಡಿಲ್ಲ : ಎಚ್.ಡಿ.ಕುಮಾರಸ್ವಾಮಿ

10 Jan 2018 11:17 AM | Politics
269 Report

ಮಂಗಳೂರು ಗಲಭೆ, ದೀಪಕ್ರಾವ್ ಕೊಲೆ ಪ್ರಕರಣದಲ್ಲಿ ನಾನು ಯೂಟರ್ನ್ ಮಾಡುತ್ತಿಲ್ಲ. ಪ್ರಕರಣದ ಬಂಧಿತ ಆರೋಪಿಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಸರಕಾರವೇಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.ಯಾವ ಪ್ರಕರಣದಲ್ಲಿಯೂ ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಸರಕಾರದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿಕೆಗಳನ್ನು ನೀಡಿ ಅದನ್ನು ಮಾಡಲು ಸಾಧ್ಯವಾಗದೆ ಹಿಟ್ ಅಂಡ್ ರನ್ ಮಾಡುತ್ತಿರುವುದು ಬಿಜೆಪಿಯವರು ಎಂದು ಎಚ್ ಡಿಕೆ ಟೀಕಿಸಿದರು.

ದೀಪಕ್ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕಾರ್ಪೊರೇಟರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದೇನೆಯೆ ಹೊರತು, ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಸ್ವತಃ ಆ ಕಾರ್ಪೊರೇಟರ್ ಅವರೆ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೂ ಮಂಗಳೂರಿನಲ್ಲಿ ಶಾಂತಿ ನೆಲೆಸಬೇಕೆಂಬ ಕಾಳಜಿಯಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೇಕಾಗಿರುವುದು ಕೇವಲ ರಾಜಕೀಯ ಮಾತ್ರ ಎಂದು ಅವರು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಮೂಲಕ ಕಿಂಗ್ ಆಗಲಿದೆ. ರಾಜ್ಯದ ರೈತಾಪಿ ವರ್ಗ ನಮ್ಮ ಪಕ್ಷದ ಪರವಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Edited By

Shruthi G

Reported By

Madhu shree

Comments