ಸ್ಯಾಂಡಲ್ ವುಡ್ ಮಾಣಿಕ್ಯ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯುವುದು ಹೆಚ್ಚು ಕಡಿಮೆ ಪಕ್ಕಾ..!!

ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯುವುದು ಹೆಚ್ಚು ಕಡಿಮೆ ಪಕ್ಕಾ ಆಗಿದೆ. ಹೀಗೆಂದ ಕೂಡಲೇ ಯಾವ ಕ್ಷೇತ್ರ? ಯಾವ ಪಕ್ಷ? ಎಂದು ಪ್ರಶ್ನೆ ಕೇಳಿದ್ರೆ ನಿಮಗೆ ಉತ್ತರ ಸಿಗಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವೇಳೆ ಕಿಚ್ಚ ಭೇಟಿಯಾಗಿದ್ರು. ಈ ವೇಳೆ ಸುದೀಪ್ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದ್ರೆ ಪ್ರಚಾರ ಮಾಡುವ ಮನಸ್ಸಿದೆ ಅಂತಾ ಹೇಳಿದ್ದಾರೆ.
ಸುದೀಪ್ ಚುನವಾಣೆಗೆ ಸ್ಪರ್ಧೆ ಮಾಡದೇ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಅಂತಾ ಹೇಳಲಾಗುತ್ತಿದೆ.ನಾಯಕ ಸಮುದಾಯದ ಮತಗಳನ್ನು ಸೆಳೆಯೋಕೆ ಕಿಚ್ಚನನ್ನು ಬಳಸಿಕೊಳ್ಳೋಕೆ ಜೆಡಿಎಸ್ ಕೂಡ ಒಳಗೊಳಗೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗ್ತಿದೆ. ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಯ ಸುತ್ತಮುತ್ತ ಭಾಗಗಳಲ್ಲಿ ಜೆಡಿಎಸ್ ಪರವಾಗಿ ಸುದೀಪ್ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದಂದು ಸುದೀಪ್ ಖುದ್ದು ತಾವೇ ಅಡುಗೆ ಮಾಡಿ, ಉಣಬಡಿಸಿದ್ದರು. ಅಂದು ಇಬ್ಬರೂ ಸುದೀರ್ಘ 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು ಎಂಬುದು ತಿಳಿದು ಬಂದಿದೆ .
Comments