ನನಗೆ ನನ್ನ ಮಗ ಸಿಎಂ ಆಗೋ ಆಸೆ ಇರೋ ಹಾಗೆ, ನಿಮಗೆ ನಿಮ್ಮ ಮಗ ಶಾಸಕನಾಗುವ ಅಸೆ ಇಲ್ವಾ..?

10 Jan 2018 10:06 AM | Politics
348 Report

ಸಿಎಂ ಸಿದ್ದರಾಮಯ್ಯ ದೇವೇಗೌಡರು ನಾನು ಜೊತೆಗಿದ್ದು, ಪ್ರತಿಪಕ್ಷದಲ್ಲಿ ಇದ್ದೂ ಎರಡೂ ರೀತಿ ನೋಡಿದ್ದೀನಿ. ಅವರ ಆಟ ನಡೆಯಲ್ಲ ಎಂದಿದ್ದರು. ಈ  ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್​.ಡಿ ದೇವೇಗೌಡರು ನನಗೆ ಮಗನ ಸಿಎಂ ಮಾಡುವ ಆಸೆ ಇದೆ, ನಿನಗೆ ನಿನ್ನ ಮಗನನ್ನು ಶಾಸಕ ಮಾಡುವ ಆಸೆ ಇಲ್ವಾ..? ಸುಮ್ಮಸುಮ್ಮನೆ ವರುಣಾದಲ್ಲಿ ನಿಲ್ಲಿಸ್ತಾ ಇದೀಯಾ ಸಿದ್ದರಾಮಣ್ಣಾ ಎಂದು ದೇವೇಗೌಡರು ವ್ಯಂಗ್ಯವಾಡಿದ್ದಾರೆ.

ಇನ್ನೂ ಸಿಎಂ ಸಿದ್ದು ಜೊತೆ ಹಗ್ಗಜಗ್ಗಾಟದ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿಡಿ, ನಾವು ಮಾತನಾಡುವ ಮೊದಲು ಏನು ಮಾತನಾಡುತ್ತಿದ್ದೇವೆ. ನಾವಾಡಿದ ಮಾತು ನಮಗೆ ಕಗ್ಗಂಟಾಗುವುದೇ ಎಂಬ ಅರಿವಿರಬೇಕು. ನನಗಂತೂ ನನ್ನ ಮಗನನ್ನು ಸಿಎಂ ಮಾಡಬೇಕು ಎಂಬ ಆಸೆ ಇದೆ. ನಿನಗೂ ಹಾಗೆ ನಿನ್ನ ಕಾಲಾ ನಂತರ ನಿನ್ನ ಮಗನನ್ನು ಕಣಕ್ಕಿಳಿಸುವ ಆಸೆ ಇದೆ. ನಿಮ್ಮದು ನಿಮಗೆ, ನಮ್ಮದು ನಮಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ದೇವೇಗೌಡರು ತಮ್ಮ ಒಂದು ಕಾಲದ ಶಿಷ್ಯ ಸಿಎಂ ಸಿದ್ದರಾಮಯ್ಯರವರಿಗೆ ಕಿವಿಮಾತುಗಳನ್ನ ಹೇಳಿದ್ದಾರೆ.

Edited By

Shruthi G

Reported By

Madhu shree

Comments