ಜೆಡಿಎಸ್ ನಾಯಕ ನಾಣಯ್ಯರನ್ನು ಸಿಎಂ ಭೇಟಿ ಮಾಡಿರುವುದರ ಹಿಂದಿನ ರಹಸ್ಯ..?

ಕೊಡಗಿನ ರಾಜಕಾರಣದಲ್ಲಿ ಸದ್ಯದಲ್ಲೇ ಮಹತ್ವದ ಬದಲಾವಣೆಯೊಂದು ಘಟಿಸಲಿದೆಯೇ ಎಂಬ ಪ್ರಶ್ನೆಗೆ ಪುಷ್ಠಿ ನೀಡುವಂತೆ ಸಿಎಂ ಸಿದ್ದರಾಮಯ್ಯ,ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಾಧನಾ ಸಮಾವೇಶ ಹಾಗೂ ಕಾರ್ಯಕರ್ತರ ಸಮಾವೇಶ ಮುಗಿದ ತಕ್ಷಣ ಸಿದ್ದರಾಮಯ್ಯ ಹಾಗೂ ಮತ್ತಿತರರು ನೇರವಾಗಿ ಎಂ.ಸಿ. ನಾಣಯ್ಯ ಮನೆಗೆ ತೆರಳಿ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಸಮಯ ಗೌಪ್ಯವಾಗಿ ಮಾತನಾಡಿದರು. ಎಂ.ಸಿ. ನಾಣಯ್ಯ ಸೇರಿದಂತೆ ಮೂಲ ಜನತಾದಳ ಮುಖಂಡರು ಪಕ್ಷದ ವಿರುದ್ಧ ಬಂಡೆದ್ದ ಬೆನ್ನಲ್ಲೇ, ಈ ಭೇಟಿ ಮಹತ್ವ ಪಡೆದುಕೊಂಡಿದೆ. ಜೆಡಿಎಸ್ ಅತೃಪ್ತರು ಕಾಂಗ್ರೆಸ್ ಸೇರುವ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಣಯ್ಯ ಮತ್ತು ತಾವು ಆತ್ಮೀಯ ಸ್ನೇಹಿತರಾಗಿರುವುದರಿಂದ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ರಾಜಕಾರಣದಲ್ಲಿ ಚರ್ಚೆಗಳು ಸಾಮಾನ್ಯ. ಆದರೆ, ನಾಣಯ್ಯ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚಿಸಿಲ್ಲ. ಎಂ ಸಿ ನಾಣಯ್ಯ ಮಾತನಾಡಿ, 1988ರಿಂದಲೂ ಸಿದ್ದರಾಮಯ್ಯ ಜೊತೆ ಆತ್ಮೀಯತೆ ಇದೆ. ದೇವರಾಜ ಅರಸರ ಜೊತೆ ನಾವೆಲ್ಲ ರಾಜಕೀಯದಲ್ಲಿ ಬೆಳೆದು ಬಂದವರು ಎಂದರು.
Comments