ದ್ವಿಚಕ್ರ ವಾಹನ ಸವಾರರು ಐ.ಎಸ್.ಐ. ಹೆಲ್ಮೆಟ್ ಧರಿಸದಿದ್ದರೆ ಏನಾಗುತ್ತೆ ..?

ಹೆಲ್ಮೆಟ್ ಧರಿಸುವುದೆಂದರೆ ನೆಪಮಾತ್ರಕ್ಕೆ ಯಾವುದೋ ಒಂದು ಹೆಲ್ಮೆಟ್ ಹಾಕಿಕೊಳ್ಳುವುದಲ್ಲ. ಗುಣಮಟ್ಟದ ಐ.ಎಸ್.ಐ. ಹೆಲ್ಮೆಟ್ ಗೆ ಮಾತ್ರ ವಿಮೆ ಹಣ ಪಾವತಿಸಬಹುದಾಗಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಐ.ಎಸ್.ಐ. ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ ದ್ವಿಚಕ್ರವಾಹನ ಸವಾರರು ಅಪಘಾತದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡರೆ, ಅಂಗ ಊನವಾದರೆ ವಿಮಾ ಕಂಪನಿ ವಿಮೆ ಹಣವನ್ನು ಪಾವತಿಸಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಹೆಲ್ಮೆಟ್ ಕಡ್ಡಾಯ ಮಾಡಿದಾಗ ಐ.ಎಸ್.ಐ. ಮಾರ್ಕ್ ಇಲ್ಲದ ಅರ್ಧ ಹೆಲ್ಮೆಟ್ ಖರೀದಿಸಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಐ.ಎಸ್.ಐ. ಗುಣಮಟ್ಟದ ಪೂರ್ಣ ಹೆಲ್ಮೆಟ್ ಗಳನ್ನು ಧರಿಸುವಂತೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಅಭಿಯಾನ ಆರಂಭಿಸಲಾಗಿದೆ. ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಮೋಟಾರು ವಾಹನ ಕಾಯ್ದೆಯ ಪ್ರಕಾರ, ಗುಣಮಟ್ಟದ ರಕ್ಷಣಾತ್ಮಕ ಹೆಲ್ಮೆಟ್ ಧರಿಸಬೇಕಿದೆ. ಹೆಲ್ಮೆಟ್ ಗಳ ಮೇಲೆ ಕಂಪನಿ ದಿನಾಂಕ ಮೊದಲಾದ ಮಾಹಿತಿ ಸುಲಭವಾಗಿ ಓದುವಂತೆ ಇರಬೇಕಿದೆ. ನೆಪಮಾತ್ರಕ್ಕೆ ಹೆಲ್ಮೆಟ್ ಧರಿಸದೇ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ, ವಿಮೆ ಹಣ ಪಾವತಿಸಬಾರದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈಗಾಗಲೇ ಕಳಪೆ ದರ್ಜೆಯ ಅರ್ಧ ಹೆಲ್ಮೆಟ್ ಖರೀದಿಸಿದ್ದವರು ಅವುಗಳನ್ನು ಮೂಲೆಗೆ ಹಾಕಿ ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಖರೀದಿಸಬೇಕಿದೆ.
Comments