ನಾನು ಕಿಂಗ್ ಮೇಕರ್ ಅಲ್ಲ, ನಾನೇ ಕಿಂಗ್ ಆಗಲು ಬಯಸುತ್ತೇನೆ: ಎಚ್ ಡಿಕೆ

ಇಂದು ಆಹ್ವಾನದ ಮೇರೆಗೆ ಕುಮಾರಸ್ವಾಮಿ ನಿವಾಸಕ್ಕೆ ಬೆಳಗಿನ ಉಪಹಾರಕ್ಕಾಗಿ ಆಗಮಿಸಿದ್ದ ಬ್ರಿಟನ್ ನ ಭಾರತದ ರಾಯಭಾರಿ ಅಲೆಕ್ಸಾಂಡರ್ ಇವಾನ್ಸ್ ಅವರು, ಒಂದು ವೇಳೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ನಾನು ಕಿಂಗ್ ಮೇಕರ್ ಆಗಲ್ಲ. ಕಿಂಗ್ ಆಗಲು ಬಯಸುತ್ತೇನೆ ಎಂದು ಎಚ್ ಡಿಕೆ ತಿಳಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಕಿಂಗ್ ಆಗಲು ಬಯಸುತ್ತೇನೆ. ಆದರೆ ಕಿಂಗ್ ಮೇಕರ್ ಆಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ. ನನ್ನ ಪ್ರಕಾರ, ರಾಜ್ಯದ ರೈತರು ಜೆಡಿಎಸ್ ಪರವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆಯಯಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ರಾಯಭಾರಿ ಇವಾನ್ಸ್ ಅವರೊಂದಿಗೆ ಬೆಂಗಳೂರಿನಲ್ಲಿರುವ ಉಪ ರಾಯಭಾರಿ ಮ್ಯಾಕ್ ಅಲೆಸ್ಟರ್ ಮತ್ತು ಬ್ರಿಟನ್ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಅಲೆಕ್ಸ್ ಕ್ಯಾಮರೂನ್ ಕೂಡಾ ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ್ದರು.
Comments