ಜೆಡಿಎಸ್ ಶಾಸಕರನ್ನು ಬಿಜೆಪಿ ತನ್ನೆಡೆಗೆ ಸೆಳೆದಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಟಿ.ಎ.ಶರವಣ

ಜೆಡಿಎಸ್ ನ ಹಾಲಿ ಶಾಸಕರಿಗೆ ಎಲ್ಲರಿಗೂ ಸ್ಪರ್ಧೆಗೆ ಪಕ್ಷದ ಟಿಕೆಟ್ ಖಚಿತ ಎಂದು ಹೇಳಿದ ಅವರು, ಪಕ್ಷದ ಯಾವುದೇ ಶಾಸಕರು ಜೆಡಿಎಸ್ ಬಿಡುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಎಂದರು. ಜೆಡಿಎಸ್ ಶಾಸಕರನ್ನು ಬಿಜೆಪಿಯು ತನ್ನೆಡೆಗೆ ಸೆಳೆದಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಎಂದು ಟಿ.ಎ.ಶರವಣ ಪ್ರತಿಕ್ರಿಯೆ ನೀಡಿದರು
ಸಂಕ್ರಾಂತಿಯ ನಂತರ ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ರಾಯಚೂರು ಜಿಲ್ಲೆಯ ಜೆಡಿಎಸ್ ಜವಾಬ್ದಾರಿ ವಹಿಸಿರುವ ಟಿ.ಎ.ಶರವಣ ಹೇಳಿಕೆ ನೀಡಿದರು. ಒಂದು ವೇಳೆ ಪಕ್ಷದ ಮುಖಂಡರಲ್ಲಿ ವೈಮನಸ್ಯ ಅಥವಾ ಅಸಮಾಧಾನ ಇದ್ದರೆ ಬಗೆಹರಿಸಲಾಗುವುದು. ಸಂಕ್ರಾಂತಿ ಹಬ್ಬದ ನಂತರ ಹೈದರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಇನ್ನು ವಿವಿಧ ಪಕ್ಷಗಳ ಮುಖಂಡರು, ಈ ಹಿಂದೆ ಜನತಾ ಪಕ್ಷವಾಗಿದ್ದಾಗ ಜತೆಯಲ್ಲಿದ್ದವರು ಸಹ ಸಂಪರ್ಕದಲ್ಲಿದ್ದಾರೆ ಎಂದರು.
Comments