ಬ್ರಿಟೀಷ್‍ನ ಭಾರತದ ಡೆಪ್ಯೂಟಿ ಹೈ ಕಮೀಷನರ್ ರೊಂದಿಗೆ ಎಚ್ ಡಿಕೆ ಮಾತುಕತೆ

ಬ್ರಿಟೀಷ್‍ನ ಭಾರತದ ಡೆಪ್ಯೂಟಿ ಹೈ ಕಮೀಷನರ್ ಡಾ.ಅಲೆಗ್ಸಾಂಡರ್ ಇವಾನ್ಸ್ ಹಾಗೂ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಅಲೆಕ್ಸಾಕ್ಯಾಮರೂನ್ ಅವರು ಇಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಜೆ.ಪಿ.ನಗರದ ಕುಮಾರಸ್ವಾಮಿಯವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಬ್ರಿಟೀಷ್‍ನ ಭಾರತದ ಡೆಪ್ಯೂಟಿ ಹೈ ಕಮೀಷನರ್ ಮತ್ತು ಅಧಿಕಾರಿಗಳು ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಯಿತು. ನಮ್ಮ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಡಾ.ಅಲೆಗ್ಸಾಂಡರ್ ಮಾಹಿತಿ ಪಡೆದುಕೊಂಡರು ಎಂದು ಹೇಳಿದರು. ನಮ್ಮ ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಅವರಿಗೆ ಬಹಳ ಕುತೂಹಲವಿದೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಯಾವ ವಿಷನ್ ಇಟ್ಟುಕೊಂಡಿದೆ ಮತ್ತು ನಮ್ಮ ನಿಲುವೇನು ಎಂಬುದರ ಬಗ್ಗೆ ಮಾತನಾಡಿದರು ಎಂದು ತಿಳಿಸಿದರು. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದುವುದು ಅವರ ಇಚ್ಛೆಯಾಗಿದೆ. ಜೊತೆಗೆ ರಾಜ್ಯ ರಾಜಕಾರಣದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವನ್ನು ಈ ಅಧಿಕಾರಿಗಳು ಹೊಂದಿದ್ದು, ನನ್ನೊಂದಿಗೆ ಈ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
Comments