ಪಿಐಓ ಸಂಸದರ ಸಭೆಗೆ ಚಾಲನೆ ನೀಡಿದ ಪ್ರಧಾನಿ
ಭಾರತ ಮೂಲದ ವ್ಯಕ್ತಿ(ಪಿಐಓ) ಸಂಸತ್ತಿನ ಸಭೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ದೆಹಲಿಯ ಚಾಣಕ್ಯಪುರಿಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಕಾರ್ಯಕ್ರಮ ಇಂದು ಜರುಗಲದೆ. 23 ದೇಶಗಳ ಸಂಸತ್ತಿನ 124 ಸದಸ್ಯರು ಹಾಗೂ 17 ಮೇಯರ್‌ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ ಮೂಲದ ವ್ಯಕ್ತಿ(ಪಿಐಓ) ಸಂಸತ್ತಿನ ಸಭೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ದೆಹಲಿಯ ಚಾಣಕ್ಯಪುರಿಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಕಾರ್ಯಕ್ರಮ ಇಂದು ಜರುಗಲದೆ. 23 ದೇಶಗಳ ಸಂಸತ್ತಿನ 124 ಸದಸ್ಯರು ಹಾಗೂ 17 ಮೇಯರ್‌ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆನಡಾ, ಬ್ರಿಟನ್, ಫಿಜಿ, ಕೀನ್ಯಾ, ಮಾರಿಷನ್, ನ್ಯೂಝಿಲೆಂಡ್, ಶ್ರೀಲಂಕಾ ಸೇರಿದಂತೆ ಹಲವಾರು ದೇಶಗಳು ಹಾಗೂ ಅಮೆರಿಕ, ಮಲೇಷ್ಯಾ, ಸ್ವಿಝರ್ಲೆಂಡ್, ಗಯಾನಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋಗಳ ಮೇಯರ್‌ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆನೆಟ್ ಸದನ ನಡೆಯುತ್ತಿರುವ ಕಾರಣ ಅಮೆರಿಕದ ಯಾವುದೇ ಸಂಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಪ್ರತಿ ವರ್ಷ ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ ಆಚರಿಸಲಾಗುತ್ತದೆ. ತಮ್ಮ ತಾಯ್ನೆಲಕ್ಕೆ ಭಾರತ ಮೂಲದ ವ್ಯಕ್ತಿಗಳ ಕೊಡುಗೆಯನ್ನು ಇದೇ ವೇಳೆ ಸ್ಮರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಸಂಸದೀಯ ಮಟ್ಟದಲ್ಲಿ ಕಾರ್ಯಕ್ರಮ ಆಚರಿಸಲಿದ್ದು ವಿದೇಶದಲ್ಲಿರುವ ಭಾರತೀಯರನ್ನು ಈ ಮೂಲಕ ತಲುಪುವ ಇರಾದೆಯನ್ನು ಭಾರತ ಹೊಂದಿದೆ.
Comments