ದೀಪಕ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಕೈವಾಡ ಇದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ

ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಗಂಭೀರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ದೀಪಕ್ ಹತ್ಯೆಗೆ ಮಂಗಳೂರಿನ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಸುಪಾರಿ ಕೊಟ್ಟಿರುವುದಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೀಪಕ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ಕೊಟ್ಟಿದ್ದು, ಈ ವಿಷಯ ಸರ್ಕಾರಕ್ಕೂ ತಿಳಿದಿದೆ. ಆದರೆ ಸತ್ಯ ಬಹಿರಂಗಪಡಿಸುತ್ತಿಲ್ಲ ಎಂದು ಹೇಳಿದರು.ದೀಪಕ್ ರಾವ್ ಕೊಲೆಗೆ ಕೆಲವು ಬಿಜೆಪಿ ನಾಯಕರು ಕಾರಣಕರ್ತರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇದೂವರೆಗೂ ನಾನು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ, ಇಂದು ನೀವೆಲ್ಲಾ ಕೇಳುತ್ತಿರುವುದಕ್ಕೆ ನಾನು ಉತ್ತರಿಸುತ್ತಿದ್ದೇನೆ. ದೀಪಕ್ ರಾವ್ ಕೊಲೆ ನಡೆದಾಗ ದುಷ್ಕರ್ಮಿಗಳ ಮೇಲೆ ಮುಸ್ಲಿಂ ಬಾಂಧವರು ಹಲ್ಲೆ ಮಾಡಿ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಆ ಮುಸ್ಲಿಂ ಬಾಂಧವರ ಹಿನ್ನೆಲೆಯಲ್ಲಿಯೇ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದ್ರೆ ಆ ನಾಲ್ಕು ಜನಕ್ಕೆ ಸುಪಾರಿ ಕೊಟ್ಟಿದ್ದವರು ಯಾರೆಂಬುದನ್ನು ಸರ್ಕಾರಕ್ಕೆ ಇನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
Comments