ಪಕ್ಷದ ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಬೇಕು : ಪ್ರಜ್ವಲ್ ರೇವಣ್ಣ

ರಾಜ್ಯದ ರೈತರು, ಜನ ಸಾಮಾನ್ಯರು ಸಂಕಷ್ಟದಲ್ಲಿರುವುದರಿಂದ ಮತ್ತೊಮ್ಮೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಹಾಗಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಜೆ ಡಿ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ರೇವಣ್ಣ ಅವರು ಕರೆ ನೀಡಿದರು.
ಅವರು ಬೆಳಗಾವಿ ಜಿಲ್ಲೆಯ ಕಿತ್ತೂರ ವಿಧಾನ ಸಭಾ ಕ್ಷೇತ್ರದ ತಿಗಡಿ ಗ್ರಾಮಕ್ಕೆ ಭೇಟಿ ಮಾತನಾಡಿದರು. ಪಕ್ಷ ಸಂಘಟನೆಯ ಬಗ್ಗೆ, ಕಾರ್ಯಕರ್ತರ ಬಗ್ಗೆ ,ಯುವ ಜನತೆ,ರೈತರ ಪರವಾದ ಹಲವಾರು ವಿಷಯಗಳನ್ನು ಮನಸ್ಸು ಬಿಚ್ಚಿ ಗ್ರಾಮಸ್ತರೋಡನೇ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ,ಮುಖಂಡರಾದ ನರೇಂದ್ರ ಬಾಬು,ಶ್ರೀಧರ ಸೇರಿದಂತೆ ಹಲವಾರು ಮುಖಂಡರು,ಗ್ರಾಮಸ್ಥರು ಉಪಸ್ಥಿತರಿದ್ದರು.
Comments