ದೇವೇಗೌಡರು ಅರಕಲಗೂಡು ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ನಡೆಸಿರುವುದೇಕೆ ?

ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮುಖಂಡರುಗಳ ಸಭೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಮಹದಾಸೆಯಲ್ಲಿರುವ ಜೆಡಿಎಸ್ ಕಳೆದ ಕೆಲ ದಿನಗಳಿಂದ ವಿವಿಧ ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿ, ಅವರ ಗೆಲುವಿಗೆ ಕೈಗೊಳ್ಳುವ ಪರಿಶ್ರಮ, ಕ್ಯಾಂಪೇನ್ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.ನಡೆದ ಸಭೆಯಲ್ಲಿ ಖುದ್ದು ದೇವೇಗೌಡರೇ ಪಾಲ್ಗೊಂಡಿದ್ದಕ್ಕೆ ಅರಕಲಗೂಡಿನ ಕಾರ್ಯಕರ್ತರು ಬಹಳ ಉತ್ಸಾಹದಿಂದ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹಾಸನ ಜಿಲ್ಲೆ ವ್ಯಾಪ್ತಿಗೆ ಬರುವ ಈ ಕ್ಷೇತ್ರ ಜೆಡಿಎಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.ಈ ಬಾರಿ ಎ.ಟಿ. ರಾಮಸ್ವಾಮಿ ಅವರಿಗೆ ಟಿಕೆಟ್ ಕೊಡುವುದೋ, ಬೇರೆ ಸಮರ್ಥ ಅಭ್ಯರ್ಥಿ ಇದ್ದಾರೋ ಎನ್ನುವ ಕುರಿತು ಸಹ ಚರ್ಚೆ ನಡೆಯಿತು.
Comments